ಹುಣಸೂರು:
ಪಿರಿಯಾಪಟ್ಟಣ ಬಸ್ ಡಿಪೋಗೆ ಸೇರಿದ ಬಸ್ ಹುಣಸೂರು ಮಾರ್ಗವಾಗಿ ಸೋಮವಾರ ಬೆಳಗ್ಗೆ ಮೈಸೂರಿಗೆ ತೆರಳುತ್ತಿತ್ತು. ಬಿಳಿಕೆರೆ ಗ್ರಾಮದೊಳಗಿನ ಬಸ್ ನಿಲ್ದಾಣಕ್ಕೆ ತೆರಳಲು ದಾಸ್ತಿಕೊಳ ಗ್ರಾಮದ ಬಳಿ ಕ್ರಾಸ್ ಮಾಡುತ್ತಿದ್ದಂತೆ, ಮೈಸೂರು ಕಡೆಯಿಂದ ಅತಿ ವೇಗದಿಂದ ಬಂದ ಜಲ್ಲಿಕಲ್ಲು ತುಂಬಿದ ಟಿಪ್ಪರ್ ಬಸ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಹಿಮ್ಮುಖವಾಗಿ ಚಲಿಸಿ ಹೆದ್ದಾರಿ ಬದಿಯಲ್ಲಿ ಅಳವಡಿಸಿದ್ದ ಕಬ್ಬಿಣದ ತಡೆಗೋಡೆಯನ್ನೇ ಸೀಳಿಕೊಂಡು ಹಳ್ಳಕ್ಕಿಳಿದರೆ, ಟಿಪ್ಪರ್ ದಾಸ್ತಿಕೊಳ ಗ್ರಾಮದ ದೊಡ್ಡ ಹಳ್ಳಕ್ಕೆ ಮಗುಚಿ ಬಿದ್ದಿತು.
ಬಸ್ ಚಾಲಕನ ಹಿಂಬದಿಯ ಸೀಟ್‌ನಲ್ಲಿದ್ದ ಸಮೀರಾಬಾನುಗೆ ಮುಂಭಾಗದಲ್ಲಿ ಅಳವಡಿಸಿದ್ದ ಕಬ್ಬಿಣದ ರಾಡ್ ಬಡಿದು ಎದೆ ಹಾಗೂ ತಲೆಗೆ ಪೆಟ್ಟು ಬಿದ್ದು, ಸ್ಥಳದಲ್ಲೇ ಮೃತಪಟ್ಟರು. ಬಸ್‌ನಲ್ಲಿದ್ದ ಇತರರಿಗೆ ಸೀಟಿನ ಕಬ್ಬಿಣ ತಗುಲಿ ಗಾಯಗೊಂಡಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಬೋಗನಹಳ್ಳಿಯ ನಸ್ರುಲ್ಲಾ ಷರೀಫ್ ಅವರ ಪುತ್ರಿ, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ನರ್ಸ್ ಸಮೀರಾಬಾನು(28) ಮೃತರು. ಪಿರಿಯಾಪಟ್ಟಣ ತಾಲೂಕಿನ ರಾವಂದೂರಿನ ಶಿವಪ್ಪ, ಮುನಿರಾಜು, ಮೂರ್ತಿ, ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯ ಸತೀಶ್ ಹಾಗೂ ನಗರದ ಶ್ರೀಮತಿ, ಅಬ್ದುಲ್ಲಾ, ಬಿಳಿಕೆರೆಯ ಮಲ್ಲಿಗೆ, ಅವರ ಪುತ್ರ ಸುಮಂತ್, ಲಕ್ಷ್ಮಿ, ಸಚ್ಚಿನ್, ಮಂಜುಳ ಹಾಗೂ ಚಾಲಕ ಮಲ್ಲಿಕಾರ್ಜುನ, ಕಂಡಕ್ಟರ್ ಸುಮಂತ್ ಗಾಯಗೊಂಡಿದ್ದು, ಮೈಸೂರಿನ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಹಾಗೂ ಟಿಪ್ಪರ್‌ನ ಚಾಲಕರು ಅಪಾಯದಿಂದ ಪಾರಾಗಿದ್ದಾರೆ.
ಅಪಘಾತದ ಶಬ್ದ ಕೇಳುತ್ತಿದ್ದಂತೆ ಗ್ರಾಮಸ್ಥರು ಹಾಗೂ ಪಕ್ಕದಲ್ಲೇ ಇದ್ದ ಬಿಳಿಕೆರೆ ಠಾಣೆ ಸಿಬ್ಬಂದಿ ತಕ್ಷ ಣವೇ ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು……