ಬೆಂಗಳೂರು:
ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ 6 ವಿನ್ನರ್ ಆಗಿ ಶಶಿ ಕುಮಾರ್ ಹೊರ ಹೊಮ್ಮಿದ್ದಾರೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಈ ಬಾರಿಯ ಸ್ಫರ್ಧೆಯಲ್ಲಿ ಶಶಿಕುಮಾರ್ ಚಿಂತಾಮಣಿ ಬಿಗ್ಬಾಸ್ ಸೀಜನ್ -6ರ ವೀಕ್ಷಕರ ಹಾಟ್ ಫೆವರಿಟಾಗಿ ಹೊರ ಹೊಮ್ಮಿದ್ದಾರೆ. ನಿನ್ನೆಯಿಂದ ವೀಕ್ಷಕರ ಎದೆಯಲ್ಲಿ ವಿನ್ನರ್ ಯಾರು ಎಂದು ಡವ ಡವ ಹುಟ್ಟಿಸಿತ್ತು. ಕೊನೆಗೂ ಕಿಚ್ಚ ಸುದೀಪ್, ಶಶಿಕುಮಾರ್ ಬಿಗ್ಬಾಸ್ ಸೀಜನ್-6 ವಿಜೇತ ಎಂದು ಘೋಷಿಸಿದರು.
ವಿನ್ನರ್ ಶಶಿಕುಮಾರ್ 50 ಲಕ್ಷ ರೂಪಾಯಿ ಮತ್ತು ಆಕರ್ಷಕ ಟ್ರೋಫಿಯನ್ನ ತಮ್ಮದಾಗಿಸಿಕೊಂಡಿದ್ದಾರೆ.ಬಿಗ್ ಬಾಸ್ ಸೀಜನ್ 6ರ 12ನೇ ಕಂಟೆಸ್ಟೆಂಟ್ ಆಗಿ ಶಶಿ ಬಿಗ್ಬಾಸ್ ಮನೆಯೊಳಗೆ ಎಂಟ್ರಿ ನೀಡಿದ್ದರು. ಮಾಡ್ರನ್ ರೈತ ಅಂತಾನೇ ಫೇಮಸ್ ಆಗಿದ್ದ ಇವರು, ಎಲ್ಲಾ ಟಾಸ್ಕ್ಗಳನ್ನ ಕೂಡ ಚೆನ್ನಾಗಿಯೇ ಮಾಡಿದ್ದರು. ಹೀಗಾಗಿ, ರೈತನೊಬ್ಬ ಮೊದಲ ಬಾರಿಗೆ ಬಿಗ್ ಬಾಸ್ ಗೆಲ್ತಾನೆ ಅನ್ನೊ ಮಾತು ಕೇಳಿ ಬಂದಿತ್ತು. ಅದ್ರಂತೆ ಶಶಿಕುಮಾರ್ ಬಿಗ್ಬಾಸ್ ಸೀಜನ್ -6 ರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ……