Breaking News

ಭಾರತದ ಮಾರುಕಟ್ಟೆಗೆ ಹೊಸ ಸ್ಯಾಂಟ್ರೋ..!

3.89 ಲಕ್ಷ ರೂಪಾಯಿ ಪ್ರಾರಂಭಿಕ ಬೆಲೆ....

SHARE......LIKE......COMMENT......
ನವದೆಹಲಿ: 
ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಕಾರು ಉತ್ಪಾದಕ ಸಂಸ್ಥೆ ತನ್ನ ಪ್ರಸಿದ್ಧ ಮಾದಿರಿಯ ಹ್ಯಾಚ್ ಬ್ಯಾಕ್ ಸ್ಯಾಂಟ್ರೋ ಕಾರನ್ನು ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು 3.89 ಲಕ್ಷ ರೂಪಾಯಿ ಪ್ರಾರಂಭಿಕ ಬೆಲೆಯಾಗಿದೆ.
ಈ ಹಿಂದಿನ ಸ್ಯಾಂಟ್ರೋ ಕಾರಿನ ಹೋಲಿಕೆಗಳನ್ನು ಅಷ್ಟಾಗಿ ಹೊಂದಿರದ ಹೊಸ ಸ್ಯಾಂಟ್ರೋ ವಿನ್ಯಾಸ ಸಂಪೂರ್ಣವಾಗಿ ಬದಲಾಗಿದ್ದು, ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.  ಎಹೆಚ್2 ಎಂಬ ಕೋಡ್ ಹೆಸರಿನಲ್ಲಿ ಅಭಿವೃದ್ಧಿಪಡಿಸಲಾಗಿರುವ ಹೊಸ ಮಾದರಿಯ ಸ್ಯಾಂಟ್ರೋಗಾಗಿ ಹ್ಯುಂಡೈ ಸಂಸ್ಥೆ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು, 4- ಸಿಲಿಂಡರ್ 1.1 ಲೀಟರ್ ಪೆಟ್ರೋಲ್ ಇಂಜಿನ್ ನ್ನು ಹೊಂದಿದ್ದು, ಎಎಂಟಿ ಹಾಗೂ ಸಿಎನ್ ಜಿ ಇಂಧನ ಆಯ್ಕೆಗಳೂ ಲಭ್ಯವಿದ್ದು ಪ್ರತಿ ಗಂಟೆಗೆ 20.3 ಕಿ.ಮೀ ಇಂಧನ ಕ್ಷಮತೆ ಹೊಂದಿದೆ.
ಡಿಲೈಟ್, ಎರಾ, ಮ್ಯಾಗ್ನಾ, ಸ್ಪೋರ್ಟ್ಜ್ ಮತ್ತು ಅಸ್ಟಾ ಆವೃತ್ತಿಗಳಲ್ಲಿ ಸ್ಯಾಂಟ್ರೋ ಲಭ್ಯವಿದ್ದು,  ಸ್ಪೋರ್ಟ್ಸ್ ಸಿಎನ್ ಜಿಗೆ 5.26 ಲಕ್ಷ ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ……