ಧಾರ್ಮಿಕ ಪರಂಪರೆ:
ವಿದೇಶ ಪ್ರವಾಸ ಯೋಗ ಎಲ್ಲರಿಗೂ ಇರುವುದಿಲ್ಲ. ಅವರವರ ಜಾತಕ, ಕರ್ಮ ಫಲಾನುಸಾರವಾಗಿ ಆ ಯೋಗ ಲಭ್ಯವಾಗುತ್ತದೆ. ಜಾತಕನ ಕುಂಡಲಿಯನ್ನು ಪರಿಶೀಲಿಸಿ ಅದರಲ್ಲಿ ವಿದೇಶಿ ಯೋಗ ಇದೆಯೋ ಅಥವಾ ಇಲ್ಲವೋ ಎಂದು ತಿಳಿದುಕೊಳ್ಳಬೇಕಾಗುತ್ತದೆ. ಜಾತಕದ ಕುಂಡಲಿಯಲ್ಲಿ ತೃತೀಯ,
ನವಮ ಸ್ಥಾನಗಳಲ್ಲಿ ಆ ಸ್ಥಾನಗಳ ಅಧಿಪತಿ ಹಾಗೂ ಆ ಸ್ಥಾನದಲ್ಲಿ ಇರುವ ಗ್ರಹಗಳ ವಿಚಾರ ತಿಳಿದುಕೊಂಡು ವಿದೇಶೀ ಪ್ರವಾಸದ ಬಗ್ಗೆ ವಿಚಾರ ಹೇಳಬಹುದು.
ಚಂದ್ರ, ಕುಜ (ಅಂಗಾರಕ) ಹಾಗೂ ಬುಧ ಈ ಗ್ರಹಗಳು ಪ್ರಾಯಶಃ ಈ ಸ್ಥಾನಗಳಲ್ಲಿರುತ್ತವೆ. ಲಗ್ನದಿಂದ ಮೂರನೆಯ ಮನೆ (ತೃತೀಯ ಭಾವ)ಯಿಂದ ರೈಲ್ವೆ ಪ್ರವಾಸದ ವಿಚಾರಗಳನ್ನು ತಿಳಿಯಬಹುದು. ಒಂಬತ್ತನೆಯ ಮನೆ (ನವಮ ಸ್ಥಾನ) ಯಿಂದ ಜಲ ಪ್ರಯಾಣ, ಜಲ ಪರ್ಯಟನ, ದೂರ ಪ್ರವಾಸ, ಪರದೇಶಾಗಮನ ಮತ್ತಿತರ ವಿಚಾರಗಳನ್ನು ಸೂಚಿಸುತ್ತದೆ.
ನವಮ ಸ್ಥಾನಗಳ ಅಧಿಪತಿಗಳು ಚರರಾಶಿಯಲ್ಲಿದ್ದರೆ ಅಂದರೆ ಮೇಷ, ಕಟಕ, ತುಲಾ ಮತ್ತು ಮಕರ ರಾಶಿಗಳು ಇವು ಚರರಾಶಿಗಳು ಅಥವಾ ದ್ವಿಸ್ವಭಾವ ರಾಶಿಗಳಾದ ಮಿಥುನ, ಕನ್ಯ,ಧನಸ್ಸು ಹಾಗೂ ಮೀನ ಇವುಗಳಲ್ಲಿದ್ದರೆ ವಿಪುಲವಾದ ಪ್ರವಾಸ ಅಥವಾ ಒಂದು ಜಾಗವನ್ನು ಬಿಟ್ಟು ಇನ್ನೊಂದೆಡೆಗೆ ಜಾತಕನು ಹೋಗಬೇಕಾಗುತ್ತದೆ ಅಂದರೆ ಸ್ಥಾನ ಪಲ್ಲಟವಾಗುತ್ತದೆ.
ನವಮ ಸ್ಥಾನದಲ್ಲಿ ಗುರು, ಶುಕ್ರ, ರವಿ ಅಥವಾ ಚಂದ್ರ ಶುಭ ದೃಷ್ಟಿಯುಳ್ಳವನಾಗಿದ್ದರೆ ಅಂತಹ ಜಾತಕನಿಗೆ ಪರದೇಶದಲ್ಲಿ ಭಾಗ್ಯೋದಯವಾಗುತ್ತದೆ. ಅದೇ ಪಾಪಗ್ರಹ ನವಮದಲ್ಲಿದ್ದು ರವಿ, ಚಂದ್ರ, ನವಮದಲ್ಲಿ ಪಾಪದೃಷ್ಟಿಯುಳ್ಳವನಾಗಿದ್ದರೆ ಬೇರೆ ದೇಶದಲ್ಲಿ ಲಾಭಕ್ಕಿಂತ ನಷ್ಟವನ್ನೇ ಜಾಸ್ತಿ ಅನುಭವಿಸಬೇಕಾಗುತ್ತದೆ
ಜಲರಾಶಿಗಳಾದ ಕಟಕ, ವೃಶ್ಚಿಕ, ಮೀನ ರಾಶಿಗಳಲ್ಲಿದ್ದರೆ ಅಥವಾ ಆ ಗ್ರಹಗಳು ತೃತೀಯ ನವಮದಲ್ಲಿದ್ದರೆ ಸಮುದ್ರಯಾನ ಲಭ್ಯವಾಗುತ್ತದೆ. ಲಗ್ನದಿಂದ ದಶಮ ಅಥವಾ ದ್ವಾದಶ ರಾಶಿಗಳಲ್ಲಿ ಜಲರಾಶಿ ಗ್ರಹಗಳಾದ ಕಟಕ, ವೃಶ್ಚಿಕ, ಮೀನರಾಶಿಗಳಿದ್ದರೆ ಕಟಕ ರಾಶಿಗೆ ಚಂದ್ರ, ವೃಶ್ಚಿಕ ರಾಶಿಗೆ ಅಂಗಾರಕ ಹಾಗೂ ಮೀನ ರಾಶಿಗೆ ಗುರು ಇದ್ದರೆ ಜಾತಕನು ತನ್ನ ಇಳಿ ವಯಸ್ಸಿನಲ್ಲಿ ಸಮುದ್ರಯಾನ ಮಾಡುವ ಯೋಗ ಇರುತ್ತದೆ.
ಮಿಥುನ ಅಥವಾ ಧನುಸ್ಸು ರಾಶಿಗಳಲ್ಲಿ ಜಾತಕನು ದಶಮ ಸ್ಥಾನವಾಗಿ ಅಲ್ಲಿ ಚಂದ್ರನಿದ್ದರೆ ದೂರದೇಶದ ಪ್ರವಾಸ ಮಾಡುವ ಯೋಗವಿರುತ್ತದೆ ಹಾಗೂ ಅಲ್ಲಿಯೇ ವಾಸ ಮಾಡುವ ಯೋಗವಿರುತ್ತದೆ.ಚಂದ್ರನು ಲಗ್ನದಲ್ಲಿದ್ದರೆ ದಶಮ ಅಥವಾ ಚತುರ್ಥ ಸ್ಥಾನಗಳ ಪೈಕಿ ಯಾವ ಸ್ಥಾನದಲ್ಲಾದರೂ ಇದ್ದ ಮೇಷ,ಮಿಥುನ, ಕನ್ಯ, ತುಲಾ, ಧನಸ್ಸು, ಮಕರ, ಮೀನ ರಾಶಿಗಳಲ್ಲಿ ಇದ್ದರೂ ಆ ಜಾತಕನು ಯಾವಾಗಲೂ ಸಂಚಾರದಲ್ಲಿರುತ್ತಾನೆ. ಸೂರ್ಯ ಚಂದ್ರರ ಶುಭದೃಷ್ಟಿಗೆ ಪಾತ್ರನಾಗಿ 1,9,10,12 ನೇ ಸ್ಥಾನದಲ್ಲಿದ್ದರೆ ಪರದೇಶಕ್ಕೆ ಹೋಗುವುದರಿಂದ ಲಾಭವಾಗುತ್ತದೆ……