ಬೆಂಗಳೂರು:
ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ ವಿಧಿವಶಗೊಂಡಿದ್ದಾರೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಬಿಜಿಎಸ್ ಆಸ್ಪತ್ರೆಯಲ್ಲಿ ಮಾಸ್ಟರ್ ಹಿರಣ್ಣಯ್ಯ ಅಸ್ತಂಗತವಾಗಿದ್ದಾರೆ….
ಮಾಸ್ಟರ್ ಹಿರಣ್ಣಯ್ಯನವರ ನಿಜವಾದ ಹೆಸರು ನರಸಿಂಹಮೂರ್ತಿ. ತಂದೆ ಹಿರಣ್ಣಯ್ಯ ಮತ್ತು ತಾಯಿ ಶಾರದಮ್ಮನವರು. ಅವರು ತಮ್ಮ ಬಾಲ್ಯದಲ್ಲಿ ತಮ್ಮ ತಂದೆ ಹಿರಣ್ಣಯ್ಯನವರು ನಿರ್ಮಿಸಿದ ವಾಣಿ ಚಿತ್ರದಲ್ಲಿ ಪಾತ್ರವಹಿಸಿದಾಗ ಮಾಸ್ಟರ್ ನರಸಿಂಹಮೂರ್ತಿ ಎಂಬ ಹೆಸರು ಬಂದಿತು. ಮುಂದೆ ಅವರ ತಂದೆಯಿಂದ ಮಾಸ್ಟರ್ ಹಿರಣ್ಣಯ್ಯ ಎಂಬ ಹೆಸರು ಪಡೆದರು.
ಹಿರಣ್ಣಯ್ಯನವರ ವಿದ್ಯಾಭ್ಯಾಸ ಮೈಸೂರಿನ ಬನುಮಯ್ಯ ಪ್ರೌಡಶಾಲೆ ಮತ್ತು ಶಾರದಾ ವಿಲಾಸ್ ಕಾಲೇಜುಗಳಲ್ಲಿ ನಡೆಯಿತು.ಪ್ರಮುಖ ನಾಟಕಗಳು ಮಕ್ಮಲ್ ಟೋಪಿ, ಕಪಿಮುಷ್ಟಿ, ದೇವದಾಸಿ, ನಡುಬೀದಿ ನಾರಾಯಣ, ಲಂಚಾವತಾರ, ಪಶ್ಚಾತ್ತಾಪ, ಭ್ರಷ್ಟಾಚಾರ, ಚಪಲಾವತಾರ, ಡಬ್ಬಲ್ ತಾಳಿ, ಡಬ್ಬಲ್ ತಾಳಿ, ಸನ್ಯಾಸಿ ಸಂಸಾರ, ಸದಾರಮೆ, ಎಚ್ಚಮ ನಾಯಕ.11 ಸಾವಿರಕ್ಕೂ ಹೆಚ್ಚು ‘ಲಂಚಾವತಾರ’ ನಾಟಕ ಪ್ರದರ್ಶನಗೊಂಡಿದೆ………..