ಸಿನಿಮಾ:
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಪೆಟ್ಟಾ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದೆ. ತಮಿಳು, ತೆಲುಗು ಹಾಗು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಗೆ ಅಪ್ಪಳಿಸಿದೆ. ಬೆಳ್ಳಂ ಬೆಳಿಗ್ಗೆ ಫಸ್ಟ್ ಶೋ 3.30 ಕ್ಕೆ ಬೆಂಗಳೂರಿನ ಕಾವೇರಿ ಥೀಯೆಟರ್ ಪ್ರಾರಂಭವಾಯಿತು..
ರಜನಿಕಾಂತ್, ವಿಜಯ್ ಸೇತುಪತಿ,ನವಾಜುದ್ದೀನ್ ಸಿದ್ದಿಕಿ ಸೇರಿ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ನಟಿಯರಾದ ತ್ರಿಷಾ ಸಿಮ್ರಾನ್ ಪೆಟ್ಟಾ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಕಾರ್ತಿಕ್ ಸುಬ್ಬರಾಜ್ ಆಕ್ಷನ್ ಕಟ್ ಹೇಳಿರೋ ಸಿನಿಮಾದಲ್ಲಿ ಆಕ್ಷನ್ ಥ್ರಿಲ್ಲರ್ ಕಥೆಯಿದೆ. ರಜನಿ ಆರಂಭದ ದಿನಗಳಲ್ಲಿ ಅಭಿನಯಿಸಿದ್ದ ಮಾದರಿಯ ಪಾತ್ರ ಪೆಟ್ಟಾ ಚಿತ್ರದಲ್ಲಿದ್ದು ಅಭಿಮಾನಿಗಳು ಥಿಯೇಟರ್ಗಳಿಗೆ ಮುಗಿ ಬೀಳ್ತಿದ್ದಾರೆ……