ಬೆಂಗಳೂರು:
ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಪ್ರಧಾನಿಯವರೇ ಪ್ರಧಾನ ಸೇವಕರಾಗಿ ಜನ ಸೇವೆ ಮಾಡಲಿಲ್ಲ. ಚೌಕಿದಾರರಾಗಿ ಕಣ್ಣ ಮುಂದೆಯೇ ಸಾಲಗಾರರು ಓಡಿ ಹೋದರೂ ಮಾತನಾಡಲಿಲ್ಲ, ಆದರೆ, ರಫೇಲ್ ಡೀಲ್ ಬಗ್ಗೆಯಾದರೂ ಮಾತನಾಡಿ. ರಫೇಲ್ ಡೀಲ್‌ನಲ್ಲಿ ತಾವು ಅಂಬಾನಿಯವರಿಗೆ ತೋರುತ್ತಿರುವ ನಿಷ್ಠೆಯನ್ನು ದೇಶದ ಬಗೆಗೆ ತೋರಿದ್ದರೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ಪ್ರಧಾನಿಯೊಬ್ಬರು ಬಂಡವಾಳ ಶಾಹಿಗಳ ಪರವಾಗಿ ವ್ಯವಹಾರ ಕುದುರಿಸಲು ವಿದೇಶ ಯಾತ್ರೆಗಳನ್ನು ಮಾಡಿರುವುದು ಭಾರತದ ಇತಿಹಾಸದಲ್ಲಿಯೇ ಇದೇ ಮೊದಲು. ಪ್ರಧಾನಿಯೇ ಖಾಸಗಿ ಸಂಸ್ಥೆಗಳ ಪರವಾಗಿ ಮಧ್ಯವರ್ತಿಯಾದಾಗ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಗತಿಯೇನು? ಎಂದಿದ್ದಾರೆ ಅಲ್ಲದೆ, ಹಿಂದಿನ ರಾಜ್ಯ ಸರ್ಕಾರವನ್ನು ಕಮಿಷನ್ ಸರ್ಕಾರ ಎಂದಿದ್ದ ಮೋದಿ ಅವರೇ, ಈ ರಫೇಲ್ ಡೀಲ್‌ನಲ್ಲಿ ನಿಮಗೆಷ್ಟು ಪ್ರತಿಶತ ಕಮಿಷನ್ ಸಿಕ್ಕಿದೆ ಎಂದು ದೇಶದ ಜನತೆಗೆ ಉತ್ತರಿಸುವ ಸಮಯ ಬಂದಿದೆ. ನಿಮ್ಮಂತಹ ಮಹಾನ್ ಭಾಷಣಕಾರರು ಹೀಗೆ ಮೌನವಾದರೆ ಹೇಗೆ? ಎಂದು ಕಿಚಾಯಿಸಿದ್ದಾರೆ…….