Breaking News

ರಾಮಜನ್ಮಭೂಮಿಯಲ್ಲಿ ಪ್ರಧಾನಿ ಮೋದಿ ಬೃಹತ್​ ಸಮಾವೇಶ…!

ಪ್ರಧಾನಿಯಾದ ನಂತರ ಮೊದಲ ಬಾರಿ ಅಯೋಧ್ಯೆಗೆ....

SHARE......LIKE......COMMENT......

ವಾರಾಣಸಿ:

ವಾರಾಣಸಿಯಲ್ಲಿ ಕಳೆದ ವಾರ ಹವಾ ಸೃಷ್ಟಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಇವತ್ತು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬೃಹತ್​ ಸಮಾವೇಶ ನಡೆಸಲಿದ್ದಾರೆ. ಪ್ರಧಾನಿಯಾದ ನಂತರ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಅಯೋಧ್ಯೆಗೆ ತೆರಳುತ್ತಿದ್ದಾರೆ. ಇವತ್ತು ಚುನಾವಣಾ ಪ್ರಚಾರಕ್ಕಾಗಿ ಅಯೋಧ್ಯೆಗೆ ಭೇಟಿ ನೀಡ್ತಿದ್ದು, ಮೋದಿ ವಿವಾದಿತ ರಾಮಮಂದಿರಕ್ಕೆ ಹೋಗ್ತಾರಾ ಅನ್ನೋ ಕುತೂಹಲ ಇದೆ. ಈವರೆಗೆ ಪ್ರಧಾನಿ ಕಚೇರಿ ಅಥವಾ ಬಿಜೆಪಿ ಪಕ್ಷ ಅಧಿಕೃತವಾಗಿ ರಾಮಮಂದಿರ ಭೇಟಿಯನ್ನು ಖಚಿತಪಡಿಸಿಲ್ಲ. ಅಯೋಧ್ಯೆಯಿದ 27 ಕಿಲೋ ಮೀಟರ್​ ದೂರದ ಮಾಯಾನಗರ್​​ನಲ್ಲಿ ಮೋದಿಯವರ ಬೃಹತ್​ ಱಲಿ ನಡೆಯಲಿದೆ. ಕಳೆದ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡೋದಾಗಿ ಬಿಜೆಪಿ ನಾಯಕರು ಭರವಸೆ ನೀಡಿದ್ದರು…..