Breaking News

ರಿಲಯನ್ಸ್ ಇಂಡಸ್ಟ್ರೀಸ್ ತ್ರೈಮಾಸಿಕ ವರದಿ..!

ನಿವ್ವಳ ಲಾಭ 9,516 ಕೋಟಿ ರೂ. ಗೆ ಏರಿಕೆ....

SHARE......LIKE......COMMENT......

ನವದೆಹಲಿ:

ರಿಲಯನ್ಸ್ ಇಂಡಸ್ಟ್ರೀಸ್ ಕಳೆದ ತ್ರೈಮಾಸಿಕ ಅವಧಿಯಲ್ಲಿ 9,516 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. ಇದು ಸಂಸ್ಥೆಯ ಇತಿಹಾಸದಲ್ಲಿ ತ್ರೈಮಾಸಿಕ ಅವಧಿಯಲ್ಲಿ ಗಳಿಸಿದ ಅತಿ ಹೆಚ್ಚು ಪ್ರಮಾಣದ ಲಾಭಾಂಶವೆಂದು ಸಂಸ್ಥೆ ವರದಿಯಲ್ಲಿ ಹೇಳಿಕೊಂಡಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಲಾಭಾಂಶದಲ್ಲಿ ಶೇ.17.4ರಷ್ಟು ಹೆಚ್ಚಳವಾಗಿದೆ.ಹಿಂದಿನ ವರ್ಷದ ಎರಡನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ 8,109 ಕೋಟಿ ರೂ ಆಗಿತ್ತು ಎಂದು ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.ಈ ತ್ರೈಮಾಸಿಕ ಅವಧಿಯಲ್ಲಿ ಆರ್ಐಎಲ್ ಆದಾಯವು ಶೇ 54.5 ಹೆಚ್ಚಳವಾಗಿದೆ. 156,291 ಕೋಟಿ ರು.ಆದಾಯ ದಾಖಲಾಗಿದೆ……