ಶ್ರೀರಾಮುಲು ಕಣ್ಣು ಕೂಡ ಬಿಟ್ಟಿರಲಿಲ್ಲ ಎಂದು ತಿರುಗೇಟು..!
ರಾಮುಲು ವಿರುದ್ಧ ಹರಿಹಾಯ್ದ ವಿ.ಎಸ್.ಉಗ್ರಪ್ಪ....
ಬಳ್ಳಾರಿ:
ಸಿದ್ದರಾಮಯ್ಯ ಅವರು ಪ್ರಬುದ್ಧ ರಾಜಕಾರಣಿಯಾಗಿದ್ದು, ಅವರು ಸಚಿವರಾಗಿದ್ದಾಗ ಶ್ರೀರಾಮುಲು ಅವರು ಕಣ್ಣು ಕೂಡ ಬಿಟ್ಟಿರಲಿಲ್ಲ ಎಂದು ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀರಾಮುಲು ವಿರುದ್ಧ ಹರಿಹಾಯ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಮುಲುಗೆ 371(ಜೆ) ಗೊತ್ತಿಲ್ಲ. 420, 323, 307 ಗೊತ್ತು ಎಂದು ಹೇಳಿದ್ದು, ಜಾತಿ ಸೂಚಕವಲ್ಲ. ಅವರು ಹಾಗೆ ಹೇಳಿದ್ದರೆ, ಜಿಲ್ಲೆಯ ಶಾಸಕರಾದ ಬಿ.ನಾಗೇಂದ್ರ, ಜಿ.ಎನ್.ಗಣೇಶ್, ಇ. ತುಕಾರಾಂ ಮತ್ತು ನನಗೂ ಅನ್ವಯಿಸುತ್ತದೆ. ಆದರೆ, ಸಿದ್ದರಾಮಯ್ಯ ಹಾಗೆ ಹೇಳಿಲ್ಲ. ಸಿದ್ದರಾಮಯ್ಯ ಅವರು ಪ್ರಬುದ್ಧ ರಾಜಕಾರಣಿ ಯಾಗಿದ್ದಾರೆ. ಅವರು ಸಚಿವರಾಗಿದ್ದಾಗ ರಾಮುಲು ಕಣ್ಣು ಕೂಡ ಬಿಟ್ಟಿರಲಿಲ್ಲ ಎಂದರು……