Breaking News

ಸುಧಾಮೂರ್ತಿ ಹೆಸರಲ್ಲಿ ವಿಜಯ್ ದೇವರಕೊಂಡ ನಕಲಿ ಪತ್ರ ..!

Offers near by’ ಎಂಬ ಆ್ಯಪ್​ಗೆ ರಾಯಭಾರಿ ಎಂದು ಆಫರ್....

SHARE......LIKE......COMMENT......

ಬೆಂಗಳೂರು:

ಇನ್ಪೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ಹೆಸರಲ್ಲಿ ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಅವ್ರಿಗೆ ನಕಲಿ ಪತ್ರ ಬರೆಯಲಾಗಿದೆ. ಕೃಷ್ಣ ಎಂಬಾತ ನಕಲಿ ಲೆಟರ್ ಹೆಡ್ ಬಳಸಿ ‘Offers near by’ ಎಂಬ ಆ್ಯಪ್​ಗೆ ರಾಯಭಾರಿ ಆಗುವಂತೆ ಕೋರಿ ದೇವರಕೊಂಡಗೆ ಪತ್ರ ಬರೆದಿದ್ದಾನೆ. ದೇವರಕೊಂಡರ ಹೈದರಾಬಾದ್ ಕಚೇರಿ ವಿಳಾಸಕ್ಕೆ ಆರೋಪಿ ಕೃಷ್ಣ ಪತ್ರವನ್ನು ಸ್ಪೀಡ್ ಪೋಸ್ಟ್ ಮಾಡಿದ್ದಾನೆ. ಆದ್ರೆ ಕಾರಣಾಂತರದಿಂದ ಕಚೇರಿಯಲ್ಲಿ ಪತ್ರ ಸ್ವೀಕರಿಸದೇ ಇದ್ದಿದ್ರಿಂದ, ಇನ್ಪೋಸಿಸ್ ವಿಳಾಸಕ್ಕೆ ಪತ್ರ ವಾಪಸ್ ಬಂದಿದೆ. ನಂತ್ರ ನಕಲಿ ಪತ್ರ ಹಾಗೂ ಸುಧಾಮೂರ್ತಿ ಅವರ ನಕಲಿ ಸಹಿ ನೋಡಿ ಇನ್ಪೋಸಿಸ್ ಸಿಬ್ಬಂದಿ ಅಶ್ಚರ್ಯಕ್ಕೊಳಗಾಗಿದ್ದು, ಉದ್ಯೋಗಿ ರಮೇಶ್ ಜಯನಗರ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಜಯನಗರ ಠಾಣೆಯಲ್ಲಿ FIR ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ……