Breaking News

ಸ್ಪೈಸಿ ಚಿಲ್ಲಿ ಮೊಟ್ಟೆ ಬಿರಿಯಾನಿ..!

ಮೊಟ್ಟೆ ಬಿರಿಯಾನಿ

SHARE......LIKE......COMMENT......
ಸ್ಪೈಸಿ ಚಿಲ್ಲಿ ಮೊಟ್ಟೆ ಬಿರಿಯಾನಿಗೆ ಬೇಕಾಗುವ ಪದಾರ್ಥಗಳು…
  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
  • ಮೊಟ್ಟೆ -6-8
  • ಜೀರಿಗೆ- ಅರ್ಧ ಚಮಚ
  • ಪಲಾವ್ ಎಲೆ – 4-5
  • ಚಕ್ಕೆ- 2-3
  • ಲವಂಗ- 4-5
  • ಏಲಕ್ಕಿ- 2
  • ಈರುಳ್ಳಿ- 2 ಸಣ್ಣಗೆ ಹೆಚ್ಚಿದ್ದು
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
  • ಟೊಮೆಟೋ- ಹೆಚ್ಚಿಕೊಂಡಿದ್ದು 2
  • ಹಸಿಮೆಣಸಿನ ಕಾಯಿ – 4-5 ಉದ್ದಕ್ಕೆ ಕತ್ತರಿಸಿಕೊಂಡಿರುವುದು
  • ದನಿಯಾ ಪುಡಿ – ಅರ್ಧ ಚಮಚ
  • ಅಚ್ಚ ಖಾರದ ಪುಡಿ – 1 ಚಮಚ
  • ಅರಿಶಿನದ ಪುಡಿ – ಕಾಲು ಚಮಚ
  • ಗರಂ ಮಸಾಲೆ ಪುಡಿ – ಅರ್ಧ ಚಮಚ
  • ಮೊಸರು- ಒಂದು ಬಟ್ಟಲು
  • ಉಪ್ಪು- ರುಚಿಗೆ ತಕ್ಕಷ್ಟು
  • ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು- ಸಣ್ಣಗೆ ಹೆಚ್ಚಿಕೊಂಡಿದ್ದು ಸ್ವಲ್ಪ
  • ಬಾಸುಮತಿ ಅಕ್ಕಿ- 2 ಬಟ್ಟಲು
ಸ್ಪೈಸಿ ಚಿಲ್ಲಿ ಮೊಟ್ಟೆ ಬಿರಿಯಾನಿ ಮಾಡುವ ಸುಲಭ ವಿಧಾನ…
  • ಮೊದಲಿಗೆ ಮೊಟ್ಟೆಗಳನ್ನು ಬೇಯಿಸಿಕೊಳ್ಳಬೇಕು. ನಂತರ ಒಲೆಯ ಮೇಲೆ ಪಾತ್ರಯೊಂದನ್ನು ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಚಕ್ಕೆ, ಲವಂಗ, ಏಲಕ್ಕಿ ಹಾಗೂ ಪಲಾವ್ ಎಲೆಯನ್ನು ಹಾಕಿ ಕೆಂಪಗೆ ಮಾಡಿಕೊಂಡು ತೊಳೆದ ಬಾಸುಮತಿ ಅಕ್ಕಿಯನ್ನು ಅದಕ್ಕೆ ಹಾಕಿ ಮುಕ್ಕಾಲು ಭಾಗ ಬೇಯಿಸಿಕೊಂಡು ನೀರನ್ನು ಮಾತ್ರ ಬಸಿದಿಟ್ಟುಕೊಳ್ಳಬೇಕು. .
  • ನಂತರ ಒಲೆಯ ಮೇಲೆ ಮತ್ತೊಂದು ಪಾತ್ರೆಯನ್ನು ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ, ಜೀರಿಗೆ, ಏಲಕ್ಕಿ, ಚಕ್ಕೆ, ಲವಂಗ, ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
  • ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಟೊಮೆಟೋ, ದನಿಯಾ ಪುಡಿ, ಅಚ್ಚ ಖಾರದ ಪುಡಿ, ಅರಿಶಿನದ ಪುಡಿ, ಗರಂ ಮಸಾಲೆ ಪುಡಿ, ಮೊಸರು, ಉಪ್ಪು, ಕೊತ್ತಂಬರಿ, ಪುದೀನಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. 2 ನಿಮಿಷದ ಬಳಿಕ ಬೇಯಿಸಿಕೊಂಡ ಮೊಟ್ಟೆಗಳನ್ನು ಹಾಕಿ 3 ನಿಮಿಷ ಕುದಿಸಿ ನಂತರ ಮಾಡಿಕೊಂಡ ಬಾಸುಮತಿ ಅನ್ನದೊಂದಿಗೆ ಮಿಶ್ರಣ ಮಾಡಿದರೆ, 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದರೆ ರುಚಿಕರವಾದ ಮೊಟ್ಟೆ ಬಿರಿಯಾನಿ ಸವಿಯಲು ಸಿದ್ಧ.