ಫ್ಯಾಷನ್ ಡಿಸೈನ್:
ಹಬ್ಬದ ಸೀಸನ್ನಲ್ಲಿ ಗ್ರ್ಯಾಂಡ್ ಪ್ಲಾಸ್ಟಿಕ್ ಬಳೆ, ರಿಂಗ್ಬಳೆ, ರೇಷ್ಮೆ ನೂಲಿನಲ್ಲಿ ಸುತ್ತಿರುವ ಬಳೆ, ಡಿಸೈನರ್ ಬಳೆ, ಕುಂದನ್ ವರ್ಕ್ ಬಳೆ, ಕಡಗ ಬಳೆಗಳು ಎಂಟ್ರಿ ನೀಡಿವೆ.
ಗಾಜಿನ ಸದಾ ಬಳೆಗಳ ಮಧ್ಯೆ ಚಿನ್ನದ ಬಳೆ ಕೊನೆಯಲ್ಲಿ ವಜ್ರ ಅಥವಾ ಹವಳದ ಬಳೆ ಧರಿಸಿದರೆ ನೋಡಲು ಅಂದವಾಗಿ ಕಾಣುತ್ತದೆ. ರೇಷ್ಮೆ ಸೀರೆ ಧರಿಸಿದಾಗ ಗಾಜಿನ ಬಳೆಯಲ್ಲಿ ಸೀರೆಗೆ ಮ್ಯಾಚ್ ಇರುವ ಹಾಗೆ ಧರಿಸಿ ಕೊನೆಯಲ್ಲಿ ಬಾರ್ಡರ್ ಇರುವ ಕಲರ್ ಬಳೆಗಳು ಹಾಕಿಕೊಂಡರೆ ಕೈ ಅಂದ ದುಪ್ಪಟ್ಟಾಗುತ್ತದೆ.
ಗಾಗ್ರಾ ಧರಿಸಿದಾಗ ಅದಕ್ಕೆ ಮ್ಯಾಚ್ ಆಗುವ ಕುಂದನ್ ಡಿಸೈನ್ ಇರುವ ಬಳೆಗಳನ್ನು ಧರಿಸುವುದು ಬೆಸ್ಟ್. ಗ್ರ್ಯಾಂಡ್ ಇರುವ ಅಂಬ್ರೆಲಾ ಸಲ್ವಾರ್ಗೆ ಥ್ರೆಡ್ ಬಳೆಗಳನ್ನು ಮ್ಯಾಚ್ ಮಾಡಿ ಹಾಕಿಕೊಂಡರೆ ಉತ್ತಮ. ಹವಳ, ಮುತ್ತು, ಜೇಡ, ವರ್ಕ್ ಇರುವ ದುಬಾರಿ ಬಳೆಗಳನ್ನು ಧರಿಸಿದಾಗ ನೀರು ಸೋಕಿಸಬಾರದು.
ಕೆಲವು ಬ್ಯಾಂಗಲ್ಗಳು ಬೆವರಿಗೂ ಕೂಡ ಕಲರ್ ಹೋಗಿ ಕೈಯಲ್ಲಿ ಬಣ್ಣವಾಗÜುತ್ತದೆ. ಗಾಜಿನ ಬಳೆಗಳನ್ನು ಪೇಪರ್ನಲ್ಲಿ ಸುತ್ತಿ ಇಟ್ಟರೆ ಅದರ ಅಂದ ಹಾಳಾಗುವುದಿಲ್ಲ. ಡಿಸೈನರ್ ಬಳೆಗಳನ್ನು ಬಾಕ್ಸ್ಗೆ ಹಾಕಿ ಇಡಿ. ವಜ್ರ ಮುತ್ತು ಚಿನ್ನದ ಬಳೆಗಳನ್ನು ಬೇರೆ ಬೇರೆಯಾಗಿ ಒಡವೆ ಇಡುವ ಬಾಕ್ಸ್ನಲ್ಲಿಯೇ ಹಾಕಿ ಇಟ್ಟರೆ ಒಳ್ಳೆಯದು…….