ನವದೆಹಲಿ:
ದೇಶದಲ್ಲಿ ಹಿಂದಿ ಕಡ್ಡಾಯಕ್ಕೆ ಮೋದಿ ಸರ್ಕಾರ ಮುಂದಾಗಿದೆ. ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೆ ಹಿಂದಿ ವಿಷಯವನ್ನು ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಮಾನವಸಂಪನ್ಮೂಲ ಇಲಾಖೆಯಿಂದ ಶೀಘ್ರದಲ್ಲೇ ಆದೇಶ ಹೊರಬೀಳುವ ಸಾಧ್ಯತೆ ಇದೆ. ಮೂರು ಭಾಷೆಗಳ ಸೂತ್ರವನ್ನು ತರುವ ಮೂಲಕ ಹಿಂದಿ ಕಡ್ಡಾಯ ಮಾಡಿ ಉಳಿದ ಎರಡು ಭಾಷೆಗಳನ್ನು ಬಳಸಿಕೊಳ್ಳುವ ಅವಕಾಶ ಇದರಲ್ಲಿ ಇರಲಿದೆ. ಶೈಕ್ಷಣಿಕ ಸುಧಾರಣೆ ಹಿನ್ನೆಲೆಯಲ್ಲಿ ನೇಮಕ ಮಾಡಿದ್ದ ಕೆ.ಕಸ್ತೂರಿರಂಗನ್ ಸಮಿತಿಯ ಶಿಫಾರಸ್ಸಿನ ಆಧಾರದ ಮೇರೆಗೆ ಹಿಂದಿ ಕಡ್ಡಾಯಕ್ಕೆ ಚಿಂತನೆ ನಡೆದಿದೆ……