ದೊಡ್ಡಬಳ್ಳಾಪುರ:
ನಗರದ ಡಿ. ಕ್ರಾಸ್ ವೃತ್ತದ ರಸ್ತೆ ಬದಿ ನಿತ್ಯ ನಡೆಯುತ್ತಿದ್ದ ಭರ್ಜರಿ ಹೂ ವ್ಯಾಪಾರಕ್ಕೆ ಇದೀಗ ಕುತ್ತು ಬಂದಿದೆ.ಹೂವಿನ ಮಾರುಕಟ್ಟೆಯನ್ನು ಡಿ. ಕ್ರಾಸ್ ಸಮೀಪದ ಮೇಲ್ಸೇತುವೆ ಕೆಳಭಾಗಕ್ಕೆ ಸ್ಥಳಾಂತರಿಸಿರುವುದೇ ಇದಕ್ಕೆ ಕಾರಣ. ಟ್ರಾಫಿಕ್ ಸಮಸ್ಯೆಯಿಂದಾಗಿ ಹೂವಿನ ಮಾರುಕಟ್ಟೆಯನ್ನು ಮೇಲ್ಸೇತುವೆ ಕೆಳಭಾಗಕ್ಕೆ ಸ್ಥಳಾಂತರಿಸಲಾಗಿದ್ದು, ಪ್ರಚಾರ ಹಾಗೂ ಮಾಹಿತಿ ಕೊರತೆಯಿಂದಾಗಿ ಹೂವಿನ ವ್ಯಾಪಾರ ಕುಸಿದಿದೆ. ಮಾಹಿತಿ ಉಳ್ಳವರು ಮೇಲ್ಸೇತುವೆ ಕೆಳಭಾಗಕ್ಕೆ ಬಂದು ಹೂ ಕೊಳ್ಳುತ್ತಿದ್ದಾರೆ. ಇದರಿಂದಾಗಿ ಹೂವಿನ ಮಾರಾಟಗಾರರು ತೀವ್ರ ನಷ್ಟ ಎದುರಿಸುತ್ತಿದ್ದು, ಭರಾಟೆ ವ್ಯಾಪಾರದ ನಿರೀಕ್ಷೆಯಲ್ಲಿ ದಿನಗಳನ್ನು ತಳ್ಳುತ್ತಿದ್ದಾರೆ.
ಟ್ರಾಫಿಕ್ ಸಮಸ್ಯೆಯ ನಿವಾರಣೆಗೆಂದು ರಸ್ತೆಬದಿಯ ಹೂ ಮಾರಾಟಗಾರರನ್ನು ಡಿ. ಕ್ರಾಸ್ ಮೇಲ್ಸೇತುವೆ ಕೆಳಕ್ಕೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ನಿತ್ಯ ಡಿ. ಕ್ರಾಸ್ ವೃತ್ತ, ಟಿ.ಬಿ. ವೃತ್ತ ಸೇರಿದಂತೆ ರಸ್ತೆ ಬದಿ ಭರ್ಜರಿ ವ್ಯಾಪಾರ ಕಾಣುತ್ತಿದ್ದ ವ್ಯಾಪಾರಿಗಳು ಪರ್ಯಾಯ ಮಾರ್ಗ ಕಾಣದೆ ಸ್ಥಳ ಬದಲಿಸಿದ್ದಾರೆ..
ದಿನನಿತ್ಯ ಬೆಂಗಳೂರು ಹಾಗೂ ಇತರ ಭಾಗಗಳಿಗೆ ಡಿ. ಕ್ರಾಸ್ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ರಸ್ತೆಬದಿ ಹೂ ಸಿಗುವ ಕಾರಣದಿಂದ ಉತ್ತಮ ವ್ಯಾಪಾರ ನಡೆಯುತ್ತಿತ್ತು. ಆದರೆ, ಸದ್ಯ ಮೇಲ್ಸೇತುವೆ ಕೆಳಗಡೆಗೆ ವರ್ಗಾವಣೆಯಾದ ಕಾರಣದಿಂದ ವ್ಯಾಪಾರಕ್ಕೆ ಅಡೆತಡೆಯಾಗಿದೆ. ಈ ಕುರಿತು ಪ್ರಚಾರವೂ ಕಡಿಮೆಯಾದ ಕಾರಣ ಹೂ ಮಾರಾಟಗಾರರಿಗೆ ನೇರ ಹೊಡೆತ ಬೀಳುತ್ತಿದೆ…….