Breaking News

ಹೆಲಿಕಾಪ್ಟರ್​ ಮೂಲಕ ರಾಕಿಭಾಯ್​​​ಗೆ ಪುಷ್ಪಾರ್ಚನೆ..!

ಎಲ್ಲೆಡೆ ಕೆ.ಜಿ.ಎಫ್​. ಹವಾ....

SHARE......LIKE......COMMENT......

ಬೆಂಗಳೂರು:

ಬಹುನಿರೀಕ್ಷಿತ ಕೆ.ಜಿ.ಎಫ್​. ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಿದ್ದು, ಅಭಿಮಾನಿಗಳು ಚಿತ್ರವನ್ನು ಭರ್ಜರಿಯಾಗಿ ಬರಮಾಡಿಕೊಂಡಿದ್ದಾರೆ.ಚಿತ್ರಕ್ಕೆ ಒಳ್ಳೆಯ ಸ್ಪಂದನೆ ವ್ಯಕ್ತವಾಗಿದೆ.ನಗರದ ನವರಂಗ್​, ಊರ್ವಶಿ, ಚಂದ್ರೋದಯ ಹಾಗೂ ಸಿದ್ದೇಶ್ವರ ಸೇರಿದಂತೆ ವಿವಿಧ ಚಿತ್ರಮಂದಿರಗಳಲ್ಲಿ ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಚಿತ್ರ ಪ್ರದರ್ಶನ ಆರಂಭವಾಗಿದೆ.ಎಲ್ಲ ಚಿತ್ರಮಂದಿರಗಳೂ ಹೂವಿನ ಅಲಂಕಾರದೊಂದಿಗೆ ಕಂಗೊಳಿಸುತ್ತಿದ್ದು, ಅಭಿಮಾನಿಗಳು ಅನ್ನಸಂತರ್ಪಣೆ ಹಾಗೂ ಕ್ಷೀರಾಭಿಷೇಕ ಮೂಲಕ ಸಂಭ್ರಮಿಸುತ್ತಿದ್ದಾರೆ. ನರ್ತಕಿ ಚಿತ್ರಮಂದಿರದಲ್ಲಿರುವ 72 ಅಡಿ ಎತ್ತರದ ಯಶ್ ಕಟೌಟ್​ಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಿದ್ದಾರೆ.​ಚಿತ್ರ ನೋಡಿದ ಬಹುತೇಕ ಅಭಿಮಾನಿಗಳು ಚಿತ್ರ ಸೂಪರ್​ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.5 ಭಾಷೆಗಳಲ್ಲಿ ಬಿಡುಗಡೆಯಾಗಿರುವ ಕೆ.ಜಿ.ಎಫ್. ಚಿತ್ರ ಸುಮಾರು 2000 ಸ್ಕ್ರೀನ್​ಗಳಲ್ಲಿ ಆರ್ಭಟಿಸುತ್ತಿದೆ……