Breaking News

ಚಲಿಸುತ್ತಿದ್ದ ರೈಲಿಗೆ ತಲೆಯೊಡ್ಡಿದ ವ್ಯಕ್ತಿ..!

ಮನೆಯಲ್ಲಿ ಹೇಳಿಬಂದು ಆತ್ಮಹತ್ಯೆ....

FILE

ಚಿಕ್ಕಬಳ್ಳಾಪುರ:

ಚಲಿಸುತ್ತಿದ್ದ ರೈಲಿಗೆ ತಲೆವೊಡ್ಡಿ ವ್ಯಕ್ತಿವೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೊತ್ತನೂರು ಗೇಟ್ ಬಳಿ ನಡೆದಿದೆ.

ಮುನಿಯಪ್ಪ(40)ಮೃತ ವ್ಯಕ್ತಿ. ಈತ ಕೊತ್ತನೂರು ಗ್ರಾ‌ಮದ ನಿವಾಸಿಯಾಗಿದ್ದು, ಮಾನಸಿಕವಾಗಿ ಸ್ಥಿರತೆ ಕಳೆದುಕೊಂಡಿದ್ದ ಎನ್ನಲಾಗುತ್ತಿದೆ. ಮನೆಯವರಿಗೆ ತಾನು ರೈಲಿಗೆ ಸಿಲುಕಿ ಸಾಯುತ್ತೇನೆಂದು ತಿಳಿಸಿದ್ದನಂತೆ. ಆದೇ ರೀತಿ ಇಂದು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂದಿದ್ದಾನೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಬೈಯಪ್ಪನಹಳ್ಳಿ ಡಿವಿಷನ್ ಪೊಲೀಸ್ ಸಿಬ್ಬಂದಿ ಹಾಗೂ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ……….

leave a reply