Breaking News

2100 ರೈತರ ಸಾಲ ತೀರಿಸಿದ ಬಿಗ್-ಬಿ..!

ರೈತರ ಹೊರೆ ತಗ್ಗಿಸುವ ಆಸೆಯಿಂದ ಈ ಕೆಲಸಕ್ಕೆ ಮುಂದಾದೆ....

SHARE......LIKE......COMMENT......

ಮುಂಬೈ:

ಬಿಗ್-ಬಿ ಅಮಿತಾಬ್ ಬಚ್ಚನ್ ಬಿಹಾರ ರಾಜ್ಯದ ಸುಮಾರು 2,100 ಬಡ ರೈತರ ಸಾಲ ತೀರಿಸಿದ್ದಾರೆ.ಬಾಲಿವುಡ್ ಬಿಗ್-ಬಿ ಬಡ ರೈತರ ಸಾಲ ತೀರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಬಗ್ಗೆ ಅಮಿತಾಬ್ ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ. ಅಮಿತಾಬ್ ತಮ್ಮ ಬ್ಲಾಗ್‍ನಲ್ಲಿ, ಮಾತು ನೀಡಿದ್ದನ್ನು ಪೂರ್ಣಗೊಳಿಸಿದ್ದೇನೆ. ಸಾಲ ಹೊಂದಿದ 2,100 ರೈತರ ಸಾಲವನ್ನು ಮರು ಪಾವತಿಸಲಾಗಿದೆ. ಇನ್ನು ಕೆಲವರಿಗೆ ವೈಯಕ್ತಿಕವಾಗಿ ಕರೆದು ಶ್ವೇತಾ ಹಾಗೂ ಅಭಿಷೇಕ್ ಅವರ ಮೂಲಕ ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಅಮಿತಾಬ್ ರೈತರ ಹೊರೆ ತಗ್ಗಿಸುವ ಆಸೆಯಿಂದ ಈ ಕೆಲಸಕ್ಕೆ ಮುಂದಾದೆ. ಕೆಲಸ ಪೂರ್ಣವಾದಾಗ ತುಂಬ ನೆಮ್ಮದಿ ಸಿಕ್ಕಿತು ಎಂದು ಅವರು ಬರೆದುಕೊಂಡಿದ್ದರು……