ಯೋಗ:
ತಲೆ ಮೇಲೆ ಸೊಂಪಾಗಿ ಕೂದಲಿರಬೇಕು, ಆಗಾಗ ಬಾಚಣಿಕೆಯಿಂದ ನೀಟಾಗಿ ಬಾಚುತ್ತಿರಬೇಕು ಎಂಬುದು ತಲೆ ಮೇಲೆ ಕೂದಲಿದ್ದವರ ಆಸೆಗಳಲ್ಲೊಂದಾಗಿರುತ್ತದೆ.
ಆದರೆ, ಇದ್ದಕ್ಕಿದ್ದಂತೆ ಬಾಚಣಿಕೆಯಲ್ಲಿ ಜೊಂಪುಜೊಂಪು ಕೂದಲು ಬರಲು ಪ್ರಾರಂಭಿಸುತ್ತದೆ. ಇನ್ನೆರಡೇ ವರ್ಷದಲ್ಲಿ ತಲೆ ಬಾಣಲೆಯಾಗಿಬಿಡುತ್ತೇನೋ ಎಂಬ ಆತಂಕ ಶುರುವಾಗುತ್ತದೆ.
ಬದಲಾಗುತ್ತಿರುವ ಜೀವನಶೈಲಿ, ಅತಿಯಾದ ವಾಯುಮಾಲಿನ್ಯ ಇಂಥ ಆತಂಕವನ್ನು ತಂದೊಡ್ಡಿದೆ. ತಲೆತುಂಬ ಇದ್ದ ಕೂದಲು ನೋಡನೋಡುತ್ತಿದ್ದಂತೆ ಖಾಲಿಖಾಲಿಯಾಗಿರುತ್ತದೆ. ತಲೆ ಬಾಚುವುದೆಂದರೆ ನಡುಕ ಹುಟ್ಟಲು ಆರಂಭವಾಗುತ್ತದೆ. ಇದಕ್ಕೆ ಪರಿಹಾರ ಇಲ್ಲವೆ ಎಂದು ನೀವು ಕೇಳಬಹುದು. ಖಂಡಿತ ಇದೆ. ಅದುವೆ ಯೋಗ!
ಯೋಗದಲ್ಲಿ ಖಂಡಿತ ಈ ತೊಂದರೆಗಿದೆ ಮದ್ದು. ನಿಯಮಿತವಾಗಿ ಯೋಗ ಮಾಡುವುದರಿಂದ ಕೂದಲುದುರುವಿಕೆ ನಿಲ್ಲುತ್ತದೆ. ಆದರೆ ಕೂದಲುದುರುವ ಮೊದಲನೆಯ ಹಂತದಲ್ಲೇ ಈ ಸ್ಥಿತಿಯನ್ನು ತಡೆಗಟ್ಟುವಲ್ಲಿ ಮಾತ್ರ ಯೋಗವು ಸಹಾಯ ಮಾಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಬಹಳ ಕೂದಲು ಉದುರಿ ಹೋದ ನಂತರ ಚಿಕಿತ್ಸೆಯಿಂದ ಉತ್ತಮ ಫಲಿತಾಂಶ ಸಿಗುವುದಕ್ಕಿಂತಲೂ ಹೆಚ್ಚಾಗಿ, ಈ ಸ್ಥಿತಿಯನ್ನು ತಡೆಗಟ್ಟುವಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ.
ಸುಂದರವಾದ ಕೂದಲು ತಲೆಗೆ ಕಿರೀಟ ಹೊಳೆಯುತ್ತಿರುವ, ಸುಂದರವಾದ, ಬಲಿಷ್ಠವಾದ ಕೂದಲನ್ನು ಬಯಸುವಲ್ಲಿ ಎಲ್ಲಾ ಮಹಿಳೆಯರೂ ಅಷ್ಟೇ ಏಕೆ ಪುರುಷರೂ ಒಂದೇ. ಸುಂದರವಾದ ಕೇಶವು ಖಂಡಿತವಾಗಿಯೂ ನಿಮಗೊಂದು ಕಿರೀಟವಿದ್ದಂತೆ. ನಮ್ಮ ಜೀವನದ ಮೊದಲನೆಯ ಎರಡು ದಶಕಗಳಲ್ಲಿ ನಮ್ಮ ಕೂದಲಿನ ಬೇರುಗಳು ಬಹಳ ಬಲಿಷ್ಠವಾಗಿರುತ್ತವೆ
ಯಾವ ಆಸನಗಳನ್ನು ಮಾಡಬಹುದು:
ಕೂದಲುದುರುವಿಕೆಯನ್ನು ತಡೆಗಟ್ಟಲು ಉತ್ಥಾನಾಸನ, ಶಾಸನಾಂಗಾಸನ, ಉಷ್ಟ್ರಾಸನ, ಅಧೋಮುಖ ಶ್ವಾನಾಸನ, ವಜ್ರಾಸನ, ಮತ್ಯ್ಯಾಸಾನ, ಉತ್ಥಾನಪಾದಾಸನ, ಮುಂತಾದವುಗಳನ್ನು ಮಾಡಬಹುದು……