Breaking News

ದೀಪಾವಳಿಗೆ ಪಟಾಕಿ ಸಿಡಿಸಲು ಸಮಯ ನಿಗದಿ..!

ಸುಪ್ರೀಂ​ ತೀರ್ಪಿಗೆ ತಮಿಳುನಾಡು ಸರ್ಕಾರ ಮೇಲ್ಮನವಿ.....

SHARE......LIKE......COMMENT......

ತಮಿಳುನಾಡು:

ದೀಪಾವಳಿಗೆ ಪಟಾಕಿ ಸಿಡಿಸಲು ಸಮಯ ನಿಗದಿ ಮಾಡಿರುವ ಸುಪ್ರೀಂಕೋರ್ಟ್​ ತೀರ್ಪಿಗೆ ತಮಿಳುನಾಡು ಸರ್ಕಾರ ಮೇಲ್ಮನವಿ ಸಲ್ಲಿಸಿದೆ. ಬೆಳಗ್ಗೆ 4 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ಪಟಾಕಿ ಸಿಡಿಸಲು ಅವಕಾಶ ನೀಡುವಂತೆ ಸುಪ್ರೀಂಕೋರ್ಟ್​ಗೆ ಕೋರಿಕೆ ಸಲ್ಲಿಸಿದೆ. ತಮಿಳುನಾಡು ಪಟಾಕಿ ಉದ್ಯಮವನ್ನೇ ಅವಲಂಬಿಸಿದ್ದು, ಸುಪ್ರೀಂಕೋರ್ಟ್ ತೀರ್ಪು ತಮಿಳುನಾಡಿನ ಪಟಾಕಿ ಉದ್ಯಮ ಮತ್ತು ಭಾವನೆಗಳಿಗೂ ಘಾಸಿ ಉಂಟು ಮಾಡಿದೆ. ಹೀಗಾಗಿ ಸಮಯವನ್ನು ವಿಸ್ತರಣೆ ಮಾಡುವಂತೆ ಅರ್ಜಿಯಲ್ಲಿ ಕೋರಲಾಗಿದೆ……