Breaking News

80 ಕೋಟಿ ವೆಚ್ಚದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಗೆ ಚಿನ್ನದ ರಥ..!

ರಾಜಗುರು ದ್ವಾರಕನಾಥ್​ ಸಲಹೆ ಮೇರೆಗೆ ಆದೇಶಕ್ಕೆ ಮರುಜೀವ.....

SHARE......LIKE......COMMENT......

ದಕ್ಷಿಣ ಕನ್ನಡ:

80 ಕೋಟಿ ವೆಚ್ಚದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಗೆ ಚಿನ್ನದ ರಥ ನಿರ್ಮಾಣ ಮಾಡಲು ಪ್ಲಾನಿಂಗ್​ ಆಗ್ತಿದೆ. 2006ರಲ್ಲಿ ಹೆಚ್​ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸುವರ್ಣ ರಥ ನಿರ್ಮಾಣಕ್ಕೆ ಆದೇಶ ಹೊರಡಿಸಿದ್ದರು. 15 ಕೋಟಿ ವೆಚ್ಚದಲ್ಲಿ ರಥ ನಿರ್ಮಾಣದ ಅಂದಾಜು ಸಿದ್ಧವಾಗಿತ್ತು. ಆದರೆ 13 ವರ್ಷದಿಂದ ಈ ಕಾರ್ಯ ನೆನೆಗುದಿಗೆ ಬಿದ್ದಿತ್ತು. ನಿನ್ನೆಯಷ್ಟೇ ರಾಜಗುರು ದ್ವಾರಕನಾಥ್​ ಸಲಹೆ ಮೇರೆಗೆ ಆದೇಶಕ್ಕೆ ಮರುಜೀವ ಬಂದಿದೆ. ಇದೀಗ ರಥ ನಿರ್ಮಾಣಕ್ಕೆ ಅಂದಾಜು 80 ಕೋಟಿ ಪ್ಲಾನಿಂಗ್​​​ ಮಾಡಲಾಗಿದೆ. ಅಂದಾಜು ಪಟ್ಟಿ ತಯಾರಿಸೋ ಸಂಬಂಧ ನಾಳೆ ಆಡಳಿತ ಮಂಡಳಿ ಸಭೆ ನಡೆಯಲಿದೆ…..