Breaking News

800 ಸಿಯಾಜ್ ಕಾರನ್ನ ಹಿಂಪಡೆದ ಮಾರುತಿ…!

ಸ್ಪೀಡೋಮೀಟರ್ ನಲ್ಲಿ ತಾಂತ್ರಿಕ ದೋಷ...

SHARE......LIKE......COMMENT......

ನವದೆಹಲಿ:

ಮಾರುತಿ ಸುಜೂಕಿ ಇಂಡಿಯಾ ಇತ್ತೀಚೆಗಷ್ಟೇ ತಯಾರಾದ ಸಿಯಾಜ್ ಕಾರುಗಳನ್ನು ಬೃಹತ್ ಪ್ರಮಾಣದಲ್ಲಿ ಹಿಂಪಡೆದಿದೆ. ಸ್ಪೀಡೋಮೀಟರ್ ನಲ್ಲಿ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾರುತಿ ಸುಜೂಕಿ ಇಂಡಿಯಾ ಸಿಯಾಜ್ ಕಾರುಗಳನ್ನು ಹಿಂಪಡೆದಿದೆ.

ಆ.1 ರಿಂದ ಸೆ.21 ವರೆಗೆ ತಯಾರಾಗಿದ್ದ ಮಾರುತಿ ಸುಜೂಕಿಯ ಸಿಯಾಜ್ ಡಿಸೇಲ್ ಝೀಟಾ ಮತ್ತು ಆಲ್ಫಾ ಆವೃತ್ತಿಗಳ ಸ್ಪೀಡೋಮೀಟರ್ ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಕಾರುಗಳನ್ನು ಹಿಂಪಡೆಯಲಾಗಿದೆ. ಕಾರುಗಳಲ್ಲಿನ ದೋಷವನ್ನು ಉಚಿತವಾಗಿ ಸರಿಪಡಿಸುವುದಾಗಿ ಮಾರುತಿ ಸಂಸ್ಥೆ ಹೇಳಿದ್ದು, ಬಳಕೆದಾರರು ಈ ಕೆಳಗಿನ ವೆಬ್ ಸೈಟ್ ನ ಕ್ಲಿಕ್ ಮಾಡಿ ತಮ್ಮ ಕಾರುಗಳಿಗೆ ತಪಾಸಣೆ ಅಗತ್ಯವಿದೆಯೇ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

https://apps.marutisuzuki.com/servicecampaign2.aspx