Breaking News

ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್​..!

ಸ್ಕಿಲ್​​ ಹಗರಣದಲ್ಲಿ ಬಂಧಿಸಿರುವ ಸಿಐಡಿ ಪೊಲೀಸರು...

SHARE......LIKE......COMMENT......

ಆಂಧ್ರಪ್ರದೇಶ:

ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡುನ ಸ್ಕಿಲ್​​ ಹಗರಣದಲ್ಲಿ ಸಿಐಡಿ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ,ಇಂದು ಮುಂಜಾನೆ 5.30ರ ಸುಮಾರಿಗೆ ಚಂದ್ರಬಾಬು ನಾಯ್ಡುರನ್ನ ನಂದ್ಯಾಲದಲ್ಲಿ ಅರೆಸ್ಟ್ ಮಾಡಿ ವಿಜಯವಾಡಕ್ಕೆ ಶಿಫ್ಟ್​ ಮಾಡಿದ್ದಾರೆ ಭ್ರಷ್ಟಾಚಾರ ಪ್ರಕರಣದಲ್ಲಿ A1 ಆಗಿರುವ ನಾಯ್ಡು ಸ್ಕಿಲ್​​ ಹಗರಣದಲ್ಲಿ 371 ಕೋಟಿ ರೂ. ಮೊತ್ತದ ಅರೋಪದಲ್ಲಿ ಸಿಲುಕಿದ್ದಾರೆ , ಇನ್ನು ಈ ​ಸ್ಕಿಲ್​​ ಡೆವಲಪ್​ಮೆಂಟ್​ ಕಾರ್ಪೊರೇಷನ್​​ ಸ್ಕೀಂ ಹಗರಣ ಏನೆಂದರೆ ಚಂದ್ರಬಾಬು ನಾಯ್ಡು ಆಂಧ್ರ ಸಿಎಂ ಆಗಿದ್ದ ಸಂದರ್ಭದಲ್ಲಿ ಅಂದರೆ 2016-2019ರ ಅವಧಿಯಲ್ಲಿ ಬೋಗಸ್ ಕಾಂಟ್ರಾಕ್ಟರ್​​ಗಳನ್ನು ಬಳಸಿ ಅಕ್ರಮ ನಡೆಸಿ ಸಮಾರು 3356 ಕೋಟಿ ವೆಚ್ಚದಲ್ಲಿ 6 ಸ್ಕಿಲ್​​ ಸೆಂಟರ್​ ನಿರ್ಮಾಣ ಮಾಡಿರುತ್ತಾರೆ ಆದರೆ ಈ ಯೋಜನೆ ಆರಂಭಕ್ಕೂ ಮುನ್ನ 371 ಕೋಟಿ ಟೆಂಡರ್​ ಕರೆಯದೇ 371 ಕೋಟಿ ರಿಲೀಸ್ ಮಾಡಿದ್ದಾರೆ, ಕಾಂಟ್ರಾಕ್ಟರ್​ಗಳಿಂದ ಕಿಕ್​​ಬ್ಯಾಕ್​ ಪಡೆದ ಆರೋಪದ ಅಡಿ ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ರನ್ನ ಸಿಐಡಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ….