ಮಂಡ್ಯ:
ಮಂಡ್ಯ ಜನರಿಗೆ ಜೀವಕ್ಕಿಂತ ಮೀನೇ ಮುಖ್ಯವಾಗಿದೆ. ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದ್ದರೂ ಮೀನಿಗಾಗಿ ಕೆರೆಯ ಬಳಿ ನೂರಾರು ಮಂದಿ ಮುಗಿಬಿದ್ದರು. ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಗ್ರಾಮದ ಕೆರೆಯ ಬಳಿ ಬೆಳಿಗ್ಗೆಯಿಂದ ಮೀನಿಗೆ ಜನ ಕಾದು ನಿಂತರು. ಕೆರೆಯಿಂದ ಹಿಡಿದ ಮೀನು ಖರೀದಿಗೆ ಒಬ್ಬರ ಮೇಲೊಬ್ಬರು ಮುಗಿಬಿದ್ದಿದ್ದಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೋಷಿಯಲ್ ಡಿಸ್ಟೆನ್ಸ್, ಮಾಸ್ಕ್ ಇಲ್ಲದೇ ಜನ ಗುಂಪು ಸೇರಿದ್ದು ಇದು ಆತಂಕಕ್ಕೆ ಕಾರಣವಾಗಿದೆ. ಈವರೆಗೂ ಮಂಡ್ಯದಲ್ಲಿ 12 ಕೊರೋನಾ ಪಾಸಿಟೀವ್ ಕೇಸ್ ಪತ್ತೆಯಾಗಿವೆ…