Breaking News

ಟಾಲಿವುಡ್‌ ಲೆಜೆಂಡ್ ಬಾಲಕೃಷ್ಣಗೆ ಕೊರೊನಾ..!

ಗೃಹಬಂಧದಲ್ಲಿ ಬಾಲಯ್ಯ...

SHARE......LIKE......COMMENT......

ಟಾಲಿವುಡ್:
ಟಾಲಿವುಡ್ ಲೆಜೆಂಟ್ ಬಾಲಕೃಷ್ಣಗೆ ಕೊರೊನಾ ಸೋಂಕು ತಗುಲಿದ್ದು, #NBKFANS ಮಂದಿಯಲ್ಲಿ ಆತಂಕ ಹೆಚ್ಚಾಗಿದೆ.
ಟಾಲಿವುಡ್‌ನಲ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಬಾಲಕೃಷ್ಣಗೆ ಕೊರೊನಾ ಸೋಂಕು ತಗುಲಿದೆ. ಕಳೆದ ಕೆಲವು ದಿನಗಳಿಂದ ಬಾಲಯ್ಯ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ಬಾಲಯ್ಯ ಕೊರೊನಾ ಟೆಸ್ಟ್‌ಗೆ ಒಳಗಾಗಿದ್ದರು. ಈ ಕೊರೊನಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ. ಈ ಕಾರಣಕ್ಕೆ ನಂದಮೂರಿ ಬಾಲಕೃಷ್ಣ ಗೃಹಬಂಧನಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಇದು ಬಾಲಕೃಷ್ಣ ಅಭಿಮಾನಿಗಳಿಗೆ ಆತಂಕ ತಂದಿದೆ.

ನಂದಮೂರಿ ಬಾಲಕೃಷ್ಣ ಕೋವಿಡ್ ಟೆಸ್ಟ್ ಪಾಸಿಟಿವ್ ಬಂದಿದ್ದರಿಂದ ಇಷ್ಟು ದಿನ ಅವರ ಸಂಪರ್ಕಕ್ಕೆ ಬಂದಿದ್ದರ ಬಳಿ ಮನವಿ ಮಾಡಿಕೊಂಡಿದ್ದಾರೆ. ಇಷ್ಟು ದಿನ ಬಾಲಕೃಷ್ಣ ಸಂಪರ್ಕಕ್ಕೆ ಬಂದವರಿಗೆ ಕೋವಿಡ್ ಟೆಸ್ಟ್ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಕೊರೊನಾ ನಿಯಮಾವಳಿಗಳನ್ನು ಪಾಲಿಸುವಂತೆಯೂ ಹೇಳಿದ್ದಾರೆ. ಬಾಲಕೃಷ್ಣ ಸಿನಿಮಾ ನಟನಷ್ಟೇ ಅಲ್ಲದೆ ಹಿಂದೂಪುರ ಎಂಎಲ್‌ಎ ಕೂಡ ಆಗಿರುವುದರಿಂದ ಕ್ಷೇತ್ರದ ಜನರಲ್ಲಿಯೂ ಮನವಿ ಮಾಡಿಕೊಂಡಿದ್ದಾರೆ.