Breaking News

PSIಗೆ ಮನಸ್ಸೋ ಇಚ್ಛೆ ಥಳಿಸಿದ ಕೌನ್ಸಿಲರ್..!

ಮೀರತ್​ನಲ್ಲಿ ಬಿಜೆಪಿ ದರ್ಪ......

SHARE......LIKE......COMMENT......

ಮೀರತ್:

ಉತ್ತರ ಪ್ರದೇಶದ ಮೀರತ್ ನಲ್ಲಿ ಬಿಜೆಪಿ ಪಾಲಿಕೆ ಸದಸ್ಯರ ಅಟ್ಟಹಾಸ . ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರ ಮೇಲೆ ಎಳ್ಳಷ್ಟೂ ಗೌರವ ಇಲ್ಲದಂತಾಗಿದೆ ಬಿಜೆಪಿ ಕೌನ್ಸಿಲರ್ ಹಾಗು ಹೋಟೆಲ್​ ಮಾಲೀಕನೊಬ್ಬನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಮನೀಶ್​ ಎಂಬಾತನು ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ವೊಬ್ಬರ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ ಕಾರಣ ಅವರನ್ನು ಬಂಧಿಸಲಾಗಿದೆ.

ಪಿಎಸ್​ಐ ಸುಕ್ಪಾಲ್​ ಮಹಿಳೆಯೊಬ್ಬರ ಜತೆ ಹೋಟೆಲ್​ಗೆ ಬಂದಿದ್ದರು. ಊಟ ನೀಡುವುದು ತಡವಾದಗ ಮಹಿಳೆ ಜೋರು ಮಾಡಿದ್ದಾರೆ. ಈ ವೇಳೆ ಪಕ್ಕದಲ್ಲೇ ಇದ್ದ ಪಿಎಸ್​ಐ, ಬೇಗನೆ ಕೊಡುವಂತೆ ಹೇಳಿದಾಗ ಕೆರಳಿದ ಹೋಟೆಲ್​ ಮಾಲೀಕ ಮನಬಂದಂತೆ ಥಳಿಸಿದ್ದಾನೆ.

ಮಹಿಳಾ ವಕೀಲೆಯೊಂದಿಗೆ ಹೋಟೆಲ್ ಗೆ ಬಂದಿದ್ಧ ಸಬ್ ಇನ್ಸ್ ಪೆಕ್ಟರ್  ನನ್ನು ಅವಾಚ್ಯ ಶಬ್ದಗಳಿಂದ ಬಿಜೆಪಿ ಪಾಲಿಕೆ ಸದಸ್ಯ ಮನೀಷ್ ನಿಂದಿಸಿದ್ದಾನೆ. ನಂತರ ತಾವೂಬ್ಬ ಜನಪ್ರತಿನಿಧಿಯಾಗಿದ್ದರೂ ಖಾಕಿ ಸಮವಸ್ತ್ರಕ್ಕೂ ಬೆಲೆ ಕೊಡದೆ ಕೈಯಿಂದ ಹಲ್ಲೆ ನಡೆಸಿದ್ದಾನೆ.ಸಬ್ ಇನ್ಸ್ ಪೆಕ್ಟರ್ ಕೆಳಗೆ ಬಿದ್ದರೂ ಬಿಡದ ಮನೀಷ್ ಹಿಗ್ಗಾಮುಗ್ಗಾ ಥಳಿಸಿದ್ದಾನೆ, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ…..