ಮೈಸೂರು:
ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ಗೆ ಸಿದ್ದತೆ ನಡೆಸಲಾಗುತ್ತಿದೆ. ಹೀಗಾಗಿ ಅರಮನೆಯ ದರ್ಬಾರ್ ಹಾಲ್ನಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯ ಭರದಿಂದ ಸಾಗಿದೆ.ಇಂದಿನ ಶುಭ ಲಗ್ನದಲ್ಲಿ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದೆ. ಸಿಂಹಾಸನ ಜೋಡಣೆಯ ವೇಳೆ ಐತಿಹಾಸಿಕ ಹಿನ್ನೆಲೆಯ ಅರಮನೆಯಲ್ಲಿ ನವಗ್ರಹ, ಗಣ ಹೋಮ ಮಾಡಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಡಗರ ಸಂಭ್ರಮ ಮನೆಮಾಡಿದೆ. ಸೆ.29 ರಿಂದ ಅ.8ರವರೆಗೆ ನಡೆಯುವ ಮೈಸೂರು ದಸರೆಗೆ ಅರಮನೆ ಮತ್ತು ನಗರ ಸಕಲ ರೀತಿಯಲ್ಲೂ ಸಿದ್ದಗೊಳ್ಳುತ್ತಿದೆ. ಈ ನಡುವೆಯೇ ಇಂದು ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ಆರಂಭವಾಗಿದೆ. ಸೆಪ್ಟೆಂಬರ್ 29ರಿಂದ ರಾಜಮನೆತನದ ದಸರಾ ಖಾಸಗಿ ದರ್ಬಾರ್ ಶುರುವಾಗಲಿದೆ.ದಸರಾ ದಿನಗಳಲ್ಲಿ ಯದುವೀರ್ ಒಡೆಯರ್ ಈ ರತ್ನಖಚಿತ ಸಿಂಹಾಸನದಲ್ಲಿ ಕುಳಿತು ಖಾಸಗಿ ದರ್ಬಾರ್ ನಡೆಸುತ್ತಾರೆ……