Breaking News

ಅಸ್ಥಿ ವಿಸರ್ಜನೆಗೆ 2 ಗುಂಪುಗಳ ನಡುವೆ ಮಾರಾಮಾರಿ…!

 ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಕೃತ್ಯ....

SHARE......LIKE......COMMENT......

ಶ್ರೀರಂಗಪಟ್ಟಣ:

ಮಂಡ್ಯದ ಶ್ರೀರಂಗಪಟ್ಟಣದ ಕಾವೇರಿ ಸಂಗಮದಲ್ಲಿ ಅಸ್ಥಿ ವಿಸರ್ಜನೆ ಮಾಡುವ ವಿಚಾರಕ್ಕೆ  ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಕಾವೇರಿ ನದಿಯಲ್ಲಿ ಮೃತರ ಅಸ್ಥಿ ವಿಸರ್ಜನೆಗೆ ಬರುವವರನ್ನು ಕರೆದೊಯ್ಯುವ ವಿಚಾರದಲ್ಲಿ ಗಲಾಟೆ ಆಗಿದೆ. ಎರಡು ಗುಂಪುಗಳ ನಡುವೆ ಜಗಳ ವಿಕೋಪಕ್ಕೆ ತಿರುಗಿ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಕುಡುಗೋಲಿನಿಂದ ಹಲ್ಲೆಗೆ ಮುಂದಾದ ಯುವಕರನ್ನು ಸ್ಥಳೀಯರು ತಡೆದಿದ್ದಾರೆ.ಘಟನೆ ಕಂಡು ಅಸ್ಥಿ ವಿಸರ್ಜನೆಗೆ ಬಂದಿದ್ದವರು ಹಾಗೂ ಪ್ರವಾಸಿಗರು ಬೆಚ್ಚಿದ್ದಾರೆ,ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ……