ಗೌರಿಬಿದನೂರು:
ರಾತ್ರಿ ರಿಸೆಪ್ಷನ್ನಲ್ಲಿದ್ದ ವಧು, ಬೆಳಗ್ಗೆ ಮುಹೂರ್ತದ ವೇಳೆ ಎಸ್ಕೇಪ್ ಆದ ಘಟನೆ ವರದಿಯಾಗಿದೆ. ಚಿಕ್ಕಬಳ್ಳಾಫುರ ಜಿಲ್ಲೆ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಗ್ರಾಮದ ಚನ್ನರಾಯಪ್ಪ ಕಲ್ಯಾಣ ಮಂಟಪದಲ್ಲಿ ಘಟನೆ ನಡೆದಿದೆ. ಇನ್ನೇನು ತಾಳಿ ಕಟ್ಟಿಸಿಕೊಳ್ಳುವ ಹೊತ್ತಲ್ಲಿ ವಧು ದಿಢೀರ್ ನಾಪತ್ತೆ ಆಗಿದ್ದಾಳೆ. ಕರೇಕಲ್ಲಹಳ್ಳಿಯ ಸುರೇಶ್ ಎಂಬವರ ಜೊತೆ ಮದುವೆ ನಿಶ್ಚಯವಾಗಿತ್ತು. ನಿನ್ನೆ ರಾತ್ರಿ ನಡೆದಿದ್ದ ಅರತಕ್ಷತೆಯಲ್ಲಿ ವಧು ಭಾಗಿಯಾಗಿದ್ಳು. ನಂತ್ರ ಪ್ರಿಯಕರ ಪ್ರವೀಣ್ ಜೊತೆ ಎಸ್ಕೇಪ್ ಆಗಿದ್ದಾಳೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ…..