Breaking News

ಆನಂದ್ ಸಿಂಗ್ ತಲೆಗೆ 12ಹೊಲಿಗೆ, ಕಣ್ಣಿಗೆ ಗಾಯ..!

ಕಂಪ್ಲಿ ಶಾಸಕ ಗಣೇಶ್ ವಿರುದ್ಧ ಆಕ್ರೋಶ ....

SHARE......LIKE......COMMENT......

ಬೆಂಗಳೂರು:

ಕಾಂಗ್ರೆಸ್‌ ಶಾಸಕ ಆನಂದ್‌ ಸಿಂಗ್‌ ಅವರು ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ಕೇಳಿದೊಡನೆಯೇ ವಿಜಯನಗರ ಕ್ಷೇತ್ರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ ಬೆಂಬಲಿಗರು ಬೀದಿಗಿಳಿದು ಟಯರ್‌ಗೆ ಬೆಂಕಿ ಹಚ್ಚಿ ಕಂಪ್ಲಿ ಶಾಸಕ ಗಣೇಶ್‌ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಕೆಲ ಬೆಂಬಲಿಗರು ಬೆಂಗಳೂರಿನತ್ತ ತೆರಳಿದ್ದು ತೀವ್ರ ಆತಂಕಕಾರಿ ಸ್ಥಿತಿ ನಿರ್ಮಾಣವಾಗಿದ್ದು , ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಆನಂದ್‌ ಸಿಂಗ್‌ ಅವರು ದಾಖಲಾಗಿರುವ ಅಪೋಲೋ ಆಸ್ಪತ್ರಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮೃತ್ಯುಂಜಯ ನಗರದಲ್ಲಿರುವ ಕಂಪ್ಲಿ ಶಾಸಕ ಗಣೇಶ್‌ ನಿವಾಸಕ್ಕೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಇಬ್ಬರು ಶಾಸಕರ ನಡುವೆ ಮಾರಣಾಂತಿಕ ಮಾರಾಮಾರಿ ನಡೆದಿರುವುದು ರಾಷ್ಟ್ರ ಮಟ್ಟದ ಸುದ್ದಿಯಾಗಿದ್ದು ರಾಜ್ಯ ರಾಜಕಾರಣದ ಬಗ್ಗೆ ದೇಶವ್ಯಾಪಿ ಚರ್ಚೆ ನಡೆಯುತ್ತಿದೆ. ಇದೊಂದು ಫ್ರೆಂಡ್ಲಿ ಫೈಟ್‌ ಎಂದು ಸಚಿವ ಬಿ.ಝಡ್‌‌.ಜಮೀರ್‌ ಅಹಮದ್‌ ಖಾನ್‌ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯಿಂದ ಹೊಡೆದಾಟ ನಡೆದಿರುವುದು ಖಚಿತವಾಗಿದೆ…..