Breaking News

ಇಂಧನ ವೆಚ್ಚದ ಹೊರೆ ಇಂಡಿಗೊಗೆ 652 ಕೋಟಿ ನಷ್ಟ..!

ತ್ರೈಮಾಸಿಕ ವರದಿಯಲ್ಲಿ ಸ್ಫೋಟಕ ಮಾಹಿತಿ....

SHARE......LIKE......COMMENT......

ಹೊಸದಿಲ್ಲಿ: 

ಇಂಡಿಗೊ ಪೋಷಕ ಕಂಪನಿಯಾದ ಇಂಟರ್‌ಗ್ಲೋಬ್‌ ಏವಿಯೇಷನ್‌, ಸೆಪ್ಟೆಂಬರ್‌ ತ್ರೈಮಾಸಿಕ ವರದಿಯನ್ನು ಬುಧವಾರ ಪ್ರಕಟಿಸಿದೆ. ಕಳೆದ ಅವಧಿಗೆ ಹೋಲಿಸಿದರೆ, ಇಂಡಿಗೊ ಈ ತ್ರೈಮಾಸಿಕದಲ್ಲಿ 652 ಕೋಟಿ ರೂ. ನಷ್ಟವನ್ನು ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 551.6 ಕೋಟಿ ರೂ. ಆದಾಯ ದಾಖಲಾಗಿತ್ತು.

2015ರ ನವೆಂಬರ್‌ ಈಚೆಗೆ ಇದೇ ಮೊದಲ ಬಾರಿಗೆ ನಷ್ಟವನ್ನು ಕಂಪನಿ ಕಂಡಿದೆ. ದೇಶದ ಬೃಹತ್‌ ಏರ್‌ಲೈನ್‌ ಆದ ಇಂಡಿಗೊ, ವಿಮಾನಯಾನ ವಲಯದಲ್ಲಿ ಶೇ.40ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಅಂದಹಾಗೇ, ಸೆಪ್ಟೆಂಬರ್‌ಗೆ ಅಂತ್ಯವಾದ ಎರಡನೇ ತ್ರೈಮಾಸಿಕದಲ್ಲಿ ಇಂಡಿಗೊ ಒಟ್ಟು ಆದಾಯವು ಶೇ.18ರಷ್ಟು ವೃದ್ಧಿಯಾಗಿದ್ದು 6,514 ಕೋಟಿ ರೂ. ಮುಟ್ಟಿದೆ. ಆದರೆ, ಹೆಚ್ಚಿನ ಇಂಧನ(ಎಟಿಎಫ್‌) ವೆಚ್ಚ, ರೂಪಾಯಿ ಕುಸಿತ, ವಲಯದಲ್ಲಿನ ಅನಾರೋಗ್ಯಕರ ಸ್ಪರ್ಧೆಯಿಂದಾಗಿ ಕಂಪನಿಗೆ ನಷ್ಟವಾಗಿದೆ.

ಇಂಡಿಗೊ ಸಹ-ಸಂಸ್ಥಾಪಕ ಮತ್ತು ಹಂಗಾಮಿ ಸಿಇಒ ರಾಹುಲ್‌ ಭಾಟಿಯಾ, ”ಹೆಚ್ಚಿನ ಇಂಧನ ದರ, ಅನಾರೋಗ್ಯಕರ ಸ್ಪರ್ಧೆಯಿಂದ ಭಾರತದಲ್ಲಿನ ವಿಮಾನಯಾನ ವಲಯ ಒತ್ತಡಕ್ಕೆ ಸಿಲುಕಿದೆ. ಇಂಥ ಸಂಕಷ್ಟದ ವಾತಾವರಣದ ಮಧ್ಯೆಯೂ, ನಮ್ಮ ಇಂಡಿಗೊ ಉತ್ತಮ ಸ್ಥಿತಿಯಲ್ಲಿಯೇ ಮುಂದುವರಿಯಲಿದೆ. ಕಡಿಮೆ ವೆಚ್ಚದಲ್ಲಿ ನಿರ್ವಹಣೆ ಮತ್ತು ಬಲವಾದ ಬ್ಯಾಲೆನ್ಸ್‌ಶೀಟ್‌ನಿಂದಾಗಿ ಇಂಡಿಗೊ ಚೇತರಿಸಿಕೊಳ್ಳಲಿದೆ,” ಎಂದರು……