ಬೆಂಗಳೂರು:
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಕೇಸ್ ಏರಿಕೆಯಾಗ್ತಾನೇ ಇದೆ. ರಾಜ್ಯದಲ್ಲಿಂದು 816 ಕೊರೋನಾ ಕೇಸ್ ಪತ್ತೆಯಾಗಿದ್ದು, ಬೆಂಗಳೂರು ಒಂದೆಲ್ಲೆ 776 ಕೊರೋನಾ ಕೇಸ್ ಪತ್ತೆಯಾಗಿದೆ. ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 5,180 ಇದ್ದು, ಬೆಂಗಳೂರಿನಲ್ಲಿ 4,929 ಕೋವಿಡ್ ಪ್ರಕರಣಗಳು ಸಕ್ರಿಯವಾಗಿದೆ. ರಾಜ್ಯದ ಕೊರೋನಾ ಪಾಸಿಟಿವಿಟಿ ದರ 3.62% ರಷ್ಟು ಹೆಚ್ಚಳವಾಗಿದೆ. ಇನ್ನೂ ಕೋವಿಡ್ ಗೆ ಇಂದು ಯಾರೂ ಬಲಿಯಾಗಿಲ್ಲ. ಇಂದು ಕೊರೋನಾದಿಂದ ಗುಣಮುಖರಾಗಿ 703 ಮಂದಿ ಡಿಸ್ಚಾರ್ಜ್ ಆಗಿದ್ದಾರೆ…
ಇನ್ನು ದೇಶದಲ್ಲಿ ಏರುತ್ತಲೇ ಇದೆ ಕೊರೋನಾ ಕೇಸ್‌ಗಳ ನಿನ್ನ ಒಂದೇ ದಿನಕ್ಕೆ 20 ಸಾವಿರದ ಗಡಿ ದಾಟಿದೆ ಮಹಾರಾಷ್ಟ್ರ, ಕೇರಳ, ಕರ್ನಾಟಕ, ಪಶ್ಚಿಮ ಬಂಗಾಳದೆಹಲಿ, ತಮಿಳುನಾಡು, ತೆಲಂಗಾಣ ಸೇರಿ ಹಲವೆಡೆ ಕೇಸ್ ಹೆಚ್ಚಳ ಕಂಡಿದ್ದು ದೇಶದ 12 ರಾಜ್ಯದಳಲ್ಲಿ ಆತಂಕ ಮನೆ ಮಾಡಿದೆ,ಫೆಬ್ರವರಿ ನಂತರ ಇದೇ ಮೊದಲ ಬಾರಿ ಕೇಸ್ ಮಟ್ಟ ಈ ರೀತಿ ಏರಿಕೆ ಕಂಡಿದೆ , ದೇಶದಲ್ಲಿ ಆ್ಯಕ್ಟೀವ್ ಕೇಸ್‌ಗಳ ಸಂಖ್ಯೆ 90 ಸಾವಿರಕ್ಕೆ ಏರಿಕೆಯಾಗಿದೆ…..