Breaking News

ನಭೋ ಮಂಡಲದಲ್ಲಿ 5 ಗ್ರಹಗಳ ಅಪರೂಪದ ಸಂಯೋಗ …!

ಬುಧ, ಶುಕ್ರ, ಮಂಗಳ, ಗುರು, ಮತ್ತು ಶನಿ ಗ್ರಹಗಳು ಸಮರೇಖೆಯಲ್ಲಿ ....

SHARE......LIKE......COMMENT......

ಬೆಂಗಳೂರು:

ನಭೋ ಮಂಡಲದಲ್ಲಿ ವಿಸ್ಮಯ ಘಟಿಸಿದೆ. ನಿನ್ನೆಯಿಂದ ಐದು ಗ್ರಹಗಳ ಅಪರೂಪದ ಸಂಯೋಗ ಏರ್ಪಟ್ಟಿದೆ. ಬುಧ, ಶುಕ್ರ, ಮಂಗಳ, ಗುರು, ಮತ್ತು ಶನಿ ಗ್ರಹಗಳು ಒಂದೆಡೆ ಸಮರೇಖೆಯಲ್ಲಿ ಸೇರಿಕೊಂಡಿವೆ. ಹೀಗಾಗಿ, ಭೂಮಿಯಿಂದ ಆಕಾಶದಲ್ಲಿ ಐದು ಗ್ರಹಗಳನ್ನು ಏಕಕಾಲದಲ್ಲಿ ಒಟ್ಟಿಗೆ ನೋಡುವ ಒಂದು ಅನನ್ಯ ಅವಕಾಶ ಸಿಕ್ಕಿತ್ತು. ಈ ಅಪರೂಪದ ಖಗೋಳ ವಿಸ್ಮಯವು ಮತ್ತೆ 2040ಕ್ಕೆ ಸಂಭವಿಸಲಿದೆ. 2004ರಲ್ಲಿ ಇದೇ ರೀತಿ ಗ್ರಹಗಳ ಸಂಯೋಜನೆ ಸಂಭವಿಸಿತ್ತು.

ಈ ಗ್ರಹಗಳು ಸೂರ್ಯನನ್ನು ಒಂದೇ ಸಮತಲದಲ್ಲಿ ಸುತ್ತುವುದರಿಂದ, ಅವೆಲ್ಲವೂ ಭೂಮಿಯ ಮೇಲಿನ ಆಕಾಶದಲ್ಲಿ ಒಂದರ ನಂತರ ಒಂದರಂತೆ ಸಾಲಾಗಿ ಕಾಣುತ್ತವೆ. ಆದರೂ ಅವೆಲ್ಲವೂ ತಮ್ಮದೇ ಆದ ವಿಶಿಷ್ಟ ಕಕ್ಷೆಗಳಲ್ಲಿ ತಿರುಗುತ್ತಾ ಶತಕೋಟಿ ಕಿಲೋಮೀಟರ್‌ಗಳಷ್ಟು ದೂರದಲ್ಲಿರುತ್ತವೆ. ಗ್ರಹಗಳ ಸಂಯೋಗವು ಸೋಮವಾರದವರೆಗೆ ಮುಂದುವರಿಯುತ್ತದೆ. ಸೂರ್ಯೋದಯಕ್ಕೆ ಮೊದಲು ಮತ್ತು ನಂತರದ ನಸುಕಿನ ಸಮಯದಲ್ಲಿ ಇದು ಉತ್ತಮವಾಗಿ ಗೋಚರಿಸುತ್ತದೆ. ಸೂರ್ಯೋದಯಕ್ಕೆ 45 ಮತ್ತು 90 ನಿಮಿಷಗಳ ಮೊದಲು ಅಪರೂಪದ ಗ್ರಹಗಳ ಸಂಯೋಗವು ಉತ್ತಮವಾಗಿ ಗೋಚರಿಸುತ್ತದೆ. ಎತ್ತರದ ಪ್ರದೇಶದಲ್ಲಿ ಪೂರ್ವದ ಕಡೆಗೆ ನೋಡಿ. ಈ ಘಟನೆಯನ್ನು ಬರಿಗಣ್ಣಿನಿಂದ ನೋಡಲು ಸೂರ್ಯೋದಯಕ್ಕೆ ಮುಂಚೆಯೇ ಏಳಬೇಕು………