ಬಾಗಲಕೋಟೆ:
ಟೋಪಿ ಹಾಕಿ ದ್ರೋಹ ಎಸಗಿದ ಅಪ್ಪ, ಮಕ್ಕಳ ಜೊತೆ ನನಗೇನು ಕೆಲಸ. ಈ ಜನ್ಮದಲ್ಲಿ ಅಪ್ಪ, ಮಕ್ಕಳ(ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ) ಸಹವಾಸ ಮಾಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, 20, 20 ತಿಂಗಳ ಸರ್ಕಾರ ರಚನೆ ವೇಳೆ ನನಗೆ ಮೋಸ ಮಾಡಿದವರ ಜೊತೆ ನಾನೇಕೆ ಸಖ್ಯ ಬೆಳೆಸಲಿ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಆರೋಪಕ್ಕೆ ಈ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದಲ್ಲಿ ಗೆದ್ದರೆ ಸಮ್ಮಿಶ್ರ ಸರ್ಕಾರ ಉಳಿಯುತ್ತದೆ ಎಂದು ಸಿಎಂ ಕುಮಾರಸ್ವಾಮಿಯವರು ಹೇಳಿಕೆ ನೀಡಿದ್ದಾರೆ. ಹೀಗಾಗಿ ಶಿವಮೊಗ್ಗದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತೇ, ಸರ್ಕಾರ ಉರುಳೋದು ಖಚಿತ ಎಂದರು……