Breaking News

ಈ 6 ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶವೇ ಇಲ್ಲ!

SHARE......LIKE......COMMENT......

ದೈವ ಸನ್ನಿಧಿ:

ಶನಿ ಶಿಂಗ್ಣಾಪುರ, ಶಬರಿಮಲೆ ಅಯ್ಯಪ್ಪ ದೇವಾಲಯಗಳಲ್ಲಿ ಮಹಿಳೆಯರಿಗೆ ಪ್ರವೇಶ ಇಲ್ಲವೆಂಬ ಸುದ್ದಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿ ಮಾಡಿದ್ದವು. ಈ ದೇವಾಲಯಗಳಲ್ಲಿ ಮಹಿಳೆಯರ ಪ್ರವೇಶಕ್ಕಾಗಿ ಆಗ್ರಹಿಸಿ ಕಾನೂನು ಸಮರ, ಸಾಮಾಜಿಕ ಹೋರಾಟವನ್ನೂ ನಡೆಸಲಾಗಿತ್ತು. ದೇವಾಲಯಗಳಲ್ಲಿ ಈ ರೀತಿಯ ನಿರ್ಬಂಧ ಕೇವಲ ಸ್ತ್ರೀಯರಿಗೆ ಮಾತ್ರ ಸೀಮಿತವಾಗಿಲ್ಲ.

ದೇವಾಲಯಗಳಲ್ಲಿ ಸಾಮಾನ್ಯವಾಗಿ ಪುರುಷರೇ ಅರ್ಚಕರಾಗಿದ್ದರೂ  ಭಾರತದಲ್ಲಿ ಪುರುಷರಿಗೂ ಪ್ರವೇಶ ಇಲ್ಲದಿರುವ ಹಲವು ದೇವಾಲಯಗಳಿವೆ.  ಆ ದೇವಾಲಯಗಳ ಬಗ್ಗೆ ಮಾಹಿತಿ ಹೀಗಿವೆ.

1. ಅಟಕುಲ್ ಭಗವತಿ ದೇವಾಲಯ:

ಮಹಿಳೆಯರಿಗೆ ಶಬರಿಮಲೆ ದೇವಾಲಯ ಪ್ರವೇಶಕ್ಕೆ ನಿಷೇಧವಿದೆಯೋ ಅದೇ ರಾಜ್ಯದಲ್ಲಿರುವ ಅಟಕುಲ್ ಭಗವತಿ ದೇವಾಲಯದಲ್ಲಿ ಪುರುಷರಿಗೂ ನಿರ್ಬಂಧವಿದೆ. ದೇವಾಲಯದಲ್ಲಿ ನಡೆಯುವ ಪೊಂಗಾಲ ಹಬ್ಬದಲ್ಲಿ  ಸಾವಿರಾರು ಮಂದಿ ಮಹಿಳೆಯರು ಭಾಗವಹಿಸುತ್ತಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೇಯರು ಸೇರುವ ಕಾರಣಕ್ಕೆ ಈ ಹಬ್ಬ ಗಿನ್ನೀಸ್ ಪುಸ್ತಕದಲ್ಲೂ ದಾಖಲಾಗಿದೆ.  ಫ್ರೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಸುಮಾರು 10 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಭಗವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆದರೆ ದೇವಾಲಯಕ್ಕೆ ಮಾತ್ರ ಪುರುಷರು ಪ್ರವೇಶ ಮಾಡುವಂತಿಲ್ಲ.

2. ಚಕ್ಕುಲಥುಕವು ದೇವಾಲಯ:

ಪುರುಷರಿಗೆ ಪ್ರವೇಶ ನಿರ್ಬಂಧಿಸಿರುವ ಕೇರಳದ ಮತ್ತೊಂದು ದೇವಾಲಯವೆಂದರೆ ಅದು ದುರ್ಗಾ ಮಾತೆಯನ್ನು ಆರಾಧಿಸುವ ಚಕ್ಕುಲಥುಕವು ದೇವಾಲಯ. ಕೇರಳದ ಈ ದೇವಸ್ಥಾನದಲ್ಲಿ ನಾರಿ ಪೂಜೆ ಎಂಬ ವಿಶೇಷ  ಪೂಜೆ ನಡೆಯುತ್ತದೆ. ಇದಲ್ಲದೆ ಧನು ಎಂಬ ವಿಶೇಷ ಧಾರ್ಮಿಕ ವಿಧಿ 10 ದಿನಗಳ ಕಾಲ ನಡೆಯುತ್ತದೆ. ಇದರಲ್ಲಿ ಮಹಿಳಾ ಭಕ್ತರು ಮಾತ್ರ ಪಾಲ್ಗೊಳ್ಳುವುದು ವಿಶೇಷತೆಯಾಗಿದೆ.

3. ಸಂತೋಷಿ ಮಾ ದೇವಾಲಯ:

ದೇಶದ ವಿವಿಧ ಪ್ರದೇಶಗಳಲ್ಲಿ ಸಂತೋಷಿ ಮಾ ದೇವಾಲಯಗಳನ್ನು ನೋಡಬಹುದಾಗಿದೆ. ಮಹಿಳೆಯರು ಹಾಗೂ ಅವಿವಾಹಿತ ಯುವತಿಯರು ಮಾತ್ರ ಪೂಜಿಸಿರುವ ದೇವಿಯಾಗಿದ್ದು, ಪುರುಷರು ದೇವಾಲಯವನ್ನು ಪ್ರವೇಶಿಸಬಹುದಾದರೂ ಅಲ್ಲಿ ದೇವಿಯನ್ನು ಪೂಜಿಸುವುದಿಲ್ಲ.

4.  ಪುಷ್ಕರ್ ನಲ್ಲಿರುವ ಬ್ರಹ್ಮನ ದೇವಾಲಯ:

ಮೇಲೆ ಹೇಳಿದ ಅಷ್ಟೂ ದೇವಾಲಯಗಳಲ್ಲಿ ಶಕ್ತಿ ಸ್ವರೂಪಿಣಿಯಾದ ದೇವಿಯ ಆರಾಧನೆ ನಡೆಯಲಿದ್ದು ಪುರುಷರ ಪ್ರವೇಶಕ್ಕೆ ನಿರ್ಬಂಧವಿದೆ. ಆದರೆ  ರಾಜಸ್ಥಾನದ ಪುಷ್ಕರ್ ನಲ್ಲಿರುವ ಸೃಷ್ಠಿಕರ್ತ ಬ್ರಹ್ಮನ ದೇವಾಲಯವಿದ್ದು ವಿವಾಹಿತ ಪುರುಷರಿಗೆ ಇಲ್ಲಿ ಪ್ರವೇಶವಿಲ್ಲ. ಕಾರ್ತಿಕ ಪೂರ್ಣಿಮೆಯ ದಿನದಂದು ಇಲ್ಲಿ ಬ್ರಹ್ಮನಿಗೆ ವಿಶೇಷ ಪೂಜೆ ನಡೆಯುತ್ತದೆ.

5. ಕನ್ಯಾ ಕುಮಾರಿಯಲ್ಲಿರುವ ಭಗವತಿ ಮಾ ದೇವಾಲಯ:

ಶಿವನನ್ನು ಪಡೆಯುವ ಹಠದಿಂದ ತಪಸ್ಸಿಗಾಗಿ ಪಾರ್ವತಿ ದೇವಿ ಏಕಾಂಗಿಯಾಗಿ ಸಮುದ್ರದ ಮಧ್ಯಕ್ಕೆ ತೆರಳಿದ ಪ್ರದೇಶ ಇದು ಎಂಬ ನಂಬಿಕೆ ಇದೆ. ಆದ್ದರಿಂದ ಕನ್ಯಾಕುಮಾರಿಯಲ್ಲಿರುವ ಭಗವತಿ ಮಾ ದೇವಾಲಯದಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶವಿದ್ದು, ಪುರುಷರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ.

6. ಮಾತಾ ದೇವಾಲಯ: 

ಬಿಹಾರದ ಮುಜಾಫರ್ ಪುರದಲ್ಲಿರುವ ದೇವಾಲಯದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಪ್ರವೇಶವಿದೆ. ಆದರೆ ನಿರ್ದಿಷ್ಟ ಅವಧಿಯಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶವಿದ್ದು, ಆ ಅವಧಿಯಲ್ಲಿ ದೇವಾಲಯದ ಪೂಜಾರಿಗೂ ಸಹ ಪ್ರವೇಶವನ್ನು ನಿರ್ಬಂಧಿಸಲಾಗಿರುತ್ತದೆ.