ಚಿಂಚೋಳಿ:
ಚಿಂಚೋಳಿ ವಿಧಾನಸಭಾ ಉಪ-ಸಮರ ಗೆಲ್ಲಲು ಕೈ-ಕಮಲ ನಡುವೆ ಕಸರತ್ತು ಮುಂದುವರೆದಿದೆ. ಚಿಂಚೋಳಿ ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಓರ್ವ ಸಚಿವ ಸೇರಿ ಇಬ್ಬರು ಶಾಸಕರನ್ನ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಚುನಾವಣಾ ಉಸ್ತುವಾರಿ ಡಾ.ಜಿ ಪರಮೇಶ್ವರ್ ನಿರ್ದೇಶನದಂತೆ ಸಚಿವರಾದ ಬಂಡೆಪ್ಪ ಕಾಶಂಪುರ್, ಪ್ರಿಯಾಂಕ್ ಖರ್ಗೆ, ರಾಜಶೇಖರ್ ಪಾಟೀಲ್ ನೇತೃತ್ವದ ತಂಡವನ್ನು ನೇಮಿಸಿದೆ. ಕಾಂಗ್ರೆಸ್ ತಂತ್ರಕ್ಕೆ ಕಮಲ ನಾಯಕರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಕಮಲ ಪಾಳೆಯ ಮಾಜಿ ಸಚಿವ ವಿ ಸೋಮಣ್ಣ, ಲಕ್ಷ್ಮಣ ಸವದಿ, ಶಾಸಕರಾದ ರಾಜುಗೌಡ, ದತ್ತಾತ್ರೇಯ ಪಾಟೀಲ್ ಸೇರಿದಂತೆ ಹಲವು ಶಾಸಕರನ್ನು ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ನೇಮಿಸಿದೆ……