Breaking News

ಐತಿಹಾಸಿಕವಾಗಿ ನಡೆದ ಶೋಭಾಯಾತ್ರೆ..!

ಎಸ್​ಬಿಆರ್ ಪಬ್ಲಿಕ್ ವಸತಿ ಶಾಲೆ ಸುವರ್ಣ ಮಹೋತ್ಸವ....

SHARE......LIKE......COMMENT......

ಕಲಬುರಗಿ:

ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಪ್ರತಿಷ್ಠಿತ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಎಸ್ಬಿಆರ್ ಪಬ್ಲಿಕ್ ವಸತಿ ಶಾಲೆ ಸುವರ್ಣ ಮಹೋತ್ಸವ ನಿಮಿತ್ತ ನಗರದಲ್ಲಿ ಸೋಮವಾರ ಬೃಹತ್ ಶೋಭಾಯಾತ್ರೆ ಹಾಗೂ ವಾಕ್ಥಾನ್ ಐತಿಹಾಸಿಕವಾಗಿ ನಡೆದು ದಾಖಲೆ ಬರೆಯಿತು.

ತಿಳಿ ಹಳದಿ, ಕಂದು ಬಣ್ಣದ ಪಟ್ಟಿಯ ಟಿ ಶರ್ಟ್​ ಧರಿಸಿದ್ದ ಚಿಣ್ಣರು ಬಣ್ಣದ ಚಿತ್ತಾರ ಮೂಡಿಸಿದರು. ಮಕ್ಕಳ ಹೆಜ್ಜೆ ಕುಣಿತ, ಲೇಜಿಮ್ ಕುಣಿತಕ್ಕೆ ವಾದ್ಯಗಳ ಶಬ್ದ ಮೆರಗು ನೀಡಿತು. ಮತ್ತೊಂದೆಡೆ ಹಲವು ಸಾಮಾಜಿಕ ಜಾಗೃತಿ ಮೂಡಿಸುವ ಸಂದೇಶಗಳನ್ನು ರವಾನಿಸುವ ಮೂಲಕ ವಿದ್ಯಾರ್ಥಿಗಳು ಮಾರ್ಗದುದ್ದಕ್ಕೂ ಜನರನ್ನು ಕ್ಷಣಕಾಲವೂ ಅಲುಗಾಡದಂತೆ ಹಿಡಿದಿಟ್ಟುಕೊಂಡರು. ವಾಕ್ಥಾನ್ ಹೊರಟವವರ ಸಾಲು ಸೂಪರ್ ಮಾರ್ಕೆಟ್ ಸಿಟಿ ಬಸ್ ನಿಲ್ದಾಣದಿಂದ ಜಗತ್ ವೃತ್ತವರೆಗೆ ಇತ್ತು. ಸಮಾಜ ಜಾಗೃತಿಗೊಳಿಸುವಂಥ ಮಾಹಿತಿ ನೀಡುವ, ಶರಣಬಸವೇಶ್ವರ ಸಂಸ್ಥಾನದ ಮಾಹಿತಿ, ಶರಣಬಸವೇಶ್ವರ ಪಬ್ಲಿಕ್ ಶಾಲೆ ನಡೆದು ಬಂದ ಹೆಜ್ಜೆ ಗುರುತುಗಳಿರುವ ಸ್ತಬ್ಧಚಿತ್ರಗಳು ಜನಮನ ಸೆಳೆದವು.

ಬೃಹತ್ ಶೋಭಾಯಾತ್ರೆಗೆ ಶರಣಬಸವೇಶ್ವರ ದೇವಾಲಯ ಆವರಣದಲ್ಲಿ ಮಹಾದಾಸೋಹ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯ ಕುಲಾಧಿಪತಿ ಡಾ.ಶರಣಬಸವಪ್ಪ ಅಪ್ಪ ಸಾನ್ನಿಧ್ಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು. ಶರಣಬಸವೇಶ್ವರ ದೇವಾಲಯದಿಂದ ಶುರುವಾದ ಶೋಭಾಯಾತ್ರೆ ಲಾಲಗೇರಿ ಕ್ರಾಸ್, ಸಿಟಿ ಬಸ್ ನಿಲ್ದಾಣ, ಸೂಪರ್ ಮಾರ್ಕೆಟ್, ಜಗತ್ ವೃತ್ತ, ಡಾ.ಎಸ್.ಎಂ. ಪಂಡಿತ ರಂಗಮಂದಿರ, ಖೂಬಾ ಪ್ಲಾಟ್, ಆನಂದ ಹೋಟೆಲ್ ಮಾರ್ಗವಾಗಿ  ಎಸ್ಬಿಆರ್ ಪಬ್ಲಿಕ್ ವಸತಿ ಶಾಲೆ ಸೇರಿತು……