ದಾವಣಗೆರೆ:
ದಾವಣಗೆರೆಯಲ್ಲಿ ಇತ್ತೀಚೆಗೆ ನಕಲಿ ಬಂಗಾರ ಮಾರಾಟ ಹಾವಳಿ ಕಂಡು ಬಂದಿತ್ತು. ಇದರ ಬೆನ್ನಲ್ಲೇ 200ರೂ. ಮೌಲ್ಯದ ಶೋಕೇಸ್ ಗೆ ಹಾಕುವ ಗುಂಡನ್ನು ತೋರಿಸಿ ನಕಲಿ ನಾಗಮಣಿ ಮಾರಾಟ ಮಾಡುತ್ತಿದ್ದ ಜಾಲ ಪತ್ತೆಯಾಗಿದೆ. ದಾವಣಗೆರೆ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆಯಲ್ಲಿ ನಕಲಿ ನಾಗಮಣಿ ವಂಚಕರನ್ನು ಬಂಧಿಸಲಾಗಿದೆ. ದಾವಣಗೆರೆಯ ಆನಗೋಡು ಬಳಿ ಈ ಘಟನೆ ನಡೆದಿದ್ದು ಕರಿಬಸಪ್ಪ, ಕುಮಾರ್, ಸುರೇಶ್, ಪ್ರವೀಣ್, ಶಿವಕುಮಾರ್ ಸೇರಿ ಒಟ್ಟು ಐವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
35 ಕೋಟಿ ರೂ.ಗೆ ನಾಗಮಣಿ ಬೆಲೆ ಬಾಳುತ್ತದೆ ಎಂದು ಆರೋಪಿಗಳು ಆನಗೋಡು ಕರಿಬಸಪ್ಪ ಎಂಬುವರಿಗೆ ನಂಬಿಸಿದ್ದರು ಎನ್ನಲಾಗಿದೆ. 50 ಸಾವಿರ ರೂ. ಮುಂಗಡ ಪಡೆದು 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗ್ತಿದೆ. ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಕಿರಣ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಐವರು ಆರೋಪಿಗಳನ್ನು ವಶಕ್ಕೆ ಪಡೆಲಾಗಿದೆ…..