ಬೆಂಗಳೂರು:
ಕಬ್ಬನ್ ಪಾರ್ಕ್ನಲ್ಲಿ ಅರಣ್ಯ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಅರಣ್ಯ ದಿನಾಚರಣೆ ಆಚರಿಸಲಾಯ್ತು. ಅರಣ್ಯ ಇಲಾಖೆ ಆಯೋಜಿಸಿದ್ದ ಹಸಿರು ಕರ್ನಾಟಕ್ಕಾಗಿ ಓಟ ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ವಿಜಯ್ ಭಾಸ್ಕರ್, ಆದಾಯ ತೆರಿಗೆ ಇಲಾಖೆ ಆಯುಕ್ತ ಬಿ. ಆರ್.ಬಾಲಕೃಷ್ಣನ್ ಸೇರಿ ಹಲವರು ಭಾಗಿಯಾಗಿದ್ರು.
ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿದ್ದು ವಿಶೇಷವಾಗಿತ್ತು. ಈ ವೇಳೆ ವೈಲ್ಡ್ ಫೋಟೋಗ್ರಫಿಯಿಂದ ಸಂಗ್ರಹವಾದ ಹಣವನ್ನು ಚೆಕ್ ಮೂಲಕ ಅರಣ್ಯ ಇಲಾಖೆಗೆ ದಚ್ಚು ಹಸ್ತಾಂತರಿಸಿದ್ರು. ಇನ್ನು, ಅಲ್ಲಿ ನೆರೆದಿದ್ದ ಜನರ ಒತ್ತಾಯದ ಮೇರೆಗೆ ಕ್ಯಾಟ್ ಬರೀಸ್ ಆನೆ ನಡ್ದಿದ್ದೇ ದಾರಿ ಡೈಲಾಗ್ ಹೊಡೆದು ದರ್ಶನ್ ರಂಜಿಸಿದ್ರು……