ನಾಗಮಂಗಲ:
ಜೆಡಿಎಸ್ ಸಮಾವೇಶಕ್ಕಾಗಿ ಶಾಸಕ ಸುರೇಶ್ ಗೌಡ ಹಾಗೂ ಅಭ್ಯರ್ಥಿ ಶಿವರಾಮೇಗೌಡ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ.ನಾಗಮಂಗಲ ಪಟ್ಟಣದಲ್ಲಿ ಲೋಕಸಭೆ ಉಪ ಚುನಾವಣೆಯ ಜೆ.ಡಿ.ಎಸ್ ಸಮಾವೇಶದ ಕುರಿತು ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ಸಮಾವೇಶಕ್ಕೆ ಶಿವರಾಮೇಗೌಡರ ಬೆಂಬಲಿಗ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಟಿ ಶ್ರೀನಿವಾಸ್ ಕಾರ್ಯಕರ್ತರನ್ನು ಕರೆತರಲು ಯಾವ ಪೂರ್ವ ತಯಾರಿ ಮಾಡಬೇಕು ಅಂತಾ ಪ್ರಸ್ತಾಪ ಮಾಡಿದ್ರು.
ಇದ್ರಿಂದ ಕೆರಳಿದ ಶಾಸಕ ಸುರೇಶ್ ಗೌಡ ಬೆಂಬಲಿಗ ಪುರಸಭೆ ಸದಸ್ಯ ವಿಜಯ್ ಕುಮಾರ್ ಆಕ್ಷಪ ವ್ಯಕ್ತಪಡಿಸಿದ್ರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು ತಾರಕ್ಕೇರಿತು. ನಂತ್ರ ಮಧ್ಯ ಪ್ರವೇಶಿಸಿದ ಶಾಸಕ ಸುರೇಶ್ ಗೌಡ ಎಲ್ಲರನ್ನು ಸಮಾಧಾನ ಪಡಿಸಿದ್ರು……