Breaking News

ಕಿಚ್ಚನಿಗೆ ಮತ್ತೊಂದು ಬಿಗ್ ಶಾಕ್..!

ಕೋಟಿಗೊಬ್ಬ-3 ತಂಡಕ್ಕೆ ಭಾರೀ ಸಂಕಷ್ಟ....

SHARE......LIKE......COMMENT......

ಬೆಂಗಳೂರು: 

ಪೈಲ್ವಾನ್ ಪೈರಸಿ ನಂತರ ಸುದೀಪ್‌ಗೆ ಮತ್ತೊಂದು ಆತಂಕ ಶುರುವಾಗಿದ್ದು,ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ ಕೋಟಿಗೊಬ್ಬ-3 ತಂಡಕ್ಕೆ ಭಾರೀ ಗಂಡಾಂತರ ಎದುರಾಗಿದೆ. ಕೆಲ ದಿನಗಳ ಹಿಂದೆ ಕೋಟಿಗೊಬ್ಬ-3 ಸ್ಟಿಲ್ಸ್ ರಿವೀಲ್ ಆಗಿದ್ದು, ಫಾರಿನ್‌ ಲೊಕೇಶನ್‌ನಲ್ಲಿ ಶೂಟ್‌ ನಡೆಯುತ್ತಿದ್ದುದು ಎಲ್ಲರಿಗೂ ಗೊತ್ತೇ ಇದೆ. ಆದ್ರೆ ಚಿತ್ರತಂಡಕ್ಕೆ ಮುಂಬೈ ಮೂಲದ ಏಜೆನ್ಸಿ ದೋಖಾ ನೀಡಿದೆ ಎಂಬ ಆರೋಪ ಕೇಳಿಬಂದಿದೆ. ಪೋಲೆಂಡ್‌ನಲ್ಲಿ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡುವುದಾಗಿ ಹೇಳಿ ಮುಂಬೈ ಮೂಲದ ಏಜೆನ್ಸಿ ವಂಚಿಸಿದೆ ಎನ್ನಲಾಗಿದ್ದು, ಚಿತ್ರೀಕರಣಕ್ಕೂ ಮುಂಚೆ ಇದ್ದ ದುಡ್ಡಿಗಿಂತ 45 ಲಕ್ಷ ಹೆಚ್ಚಿನ ಹಣ ಕೊಡುವಂತೆ ಕೇಳಿದೆ. ಖರ್ಚು ವೆಚ್ಚ ಜಾಸ್ತಿಯಾಗಿದೆಯೆಂದು ಕಾರಣ ಹೇಳಿ ಹೆಚ್ಚು ಹಣ ಕೇಳಿದ್ದು, ಹಣ ಇಲ್ಲವೆಂದಾಗ ಏಜೆನ್ಸಿಯವರು ಚಿತ್ರತಂಡದ ಇಬ್ಬರನ್ನು ಪೋಲೆಂಡ್‌ನಲ್ಲಿ ಒತ್ತೆಯಾಳಾಗಿಸಿಕೊಂಡಿದ್ದಾರೆ. ಅಲ್ಲದೇ, ಹೆಚ್ಚಿನ ಹಣ ಕೊಟ್ಟು ಇಬ್ಬರನ್ನು ಬಿಡಿಸಿಕೊಳ್ಳುವಂತೆ ತಾಕೀತು ಮಾಡಿದ್ದಾರೆ. ಈ ಕಾರಣಕ್ಕೆ ನಿರ್ಮಾಪಕ ಸೂರಪ್ಪ ಬಾಬು ಪೊಲೀಸ್ ಕಮಿಷನರ್‌ ಮೊರೆ ಹೋಗಿದ್ದಾರೆ. ಅಲ್ಲದೇ, ಕೇಂದ್ರ ಸಚಿವ ಸದಾನಂದಗೌಡ, ನಟ, ಎಂಎಲ್ಸಿ ಜಗ್ಗೇಶ್‌ಗೂ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ……