ಸ್ಯಾಂಡಲ್ ವುಡ್:
ಸ್ಯಾಂಡಲ್ ವುಡ್ ನ ಬಾದ್ ಷಾ ಕಿಚ್ಚ ಸುದೀಪ್ ಅಭಿನಯಿಸಿರುವ ಪೈಲ್ವಾನ್ ಚಿತ್ರ ಕರ್ನಾಟಕದಿಂದಿಡಿದು ಅಮೇರಿಕಾ, ಯೂರೋಪ್, ಆಸ್ಟ್ರೇಲಿಯಾದ ಮೂಲೆ ಮೂಲೆಯಲ್ಲು ಧೂಳೆಬ್ಬಿಸುತ್ತಿದ್ದು, ಇಂತಹ ಸಂದರ್ಭದಲ್ಲಿಯೇ ಕಿಚ್ಚನ ಪೈಲ್ವಾನ್ ಗೆ ಪೈರಸಿ ಎಂಬ ಮಹಾ ಮಾರಿಗೆ ಸಿಲುಕಿಕೊಂಡಿದ್ದು ಇದೀಗ ಚಿತ್ರದ ಪೈರಸಿ ಆರೋಪ ದರ್ಶನ್ ಫ್ಯಾನ್ಸ್ ಮೇಲೆ ಬಂದಿದೆ. ಇದೆಲ್ಲ ದರ್ಶನ್ ಅಭಿಮಾನಿಗಳು ಮಾಡಿದ್ದಾರೆ ಎನ್ನುವ ಆರೋಪ ಸಾಮಾಜಿಕ ಜಾಲತಾಣಗಲ್ಲಿ ಜ್ವಾಲ ಮುಖಿಯಂತೆ ಹರಿದಾಡುತ್ತಿದೆ.ಕಿಚ್ಚನ ಅಭಿಮಾನಿಗಳ ಆರೋಪದಿಂದ ಕೆಂಡಾಮಂಡಲವಾಗಿರುವ ದಚ್ಚುವಿನ ಅಭಿಮಾನಿಗಳು ಸರಣಿ ಟ್ವೀಟ್ ಮಾಡುತ್ತಿದ್ದಾರೆ.
ಸುದೀಪ್ ಮತ್ತು ದರ್ಶನ್ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದು ಜಗಜಾಹೀರಾಗಿದೆ. ಹಾಗಾಗಿ ಈ ಕೆಸರೆರಚಾಟ ಮತ್ತಷ್ಟು ರಂಗುಪಡೆದುಕೊಂಡಿದ್ದು, ಪೈಲ್ವಾನ್ ಸಿನಿಮಾ ಪೈರಸಿ ಆಗೋದಕ್ಕೂ ದರ್ಶನ್ ಫ್ಯಾನ್ಸ್ ಕಾರಣ ಅನ್ನೋ ಮಟ್ಟಿಗೆ ಈ ಆರೋಪ- ಪ್ರತ್ಯಾರೋಪ ಹೋಗಿದೆ.ಒಟ್ಟಾರೆ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಸ್ಯಾಂಡಲ್ವುಡ್ ಶೈನ್ ಆಗ್ತಿದೆ ಎಂದು ಖುಷಿ ಪಡುವ ಹೊತ್ತಲ್ಲ್ಲೆ. ಚಂದನವನದಲ್ಲಿ ಫ್ಯಾನ್ ವಾರ್ ಶುರುವಾಗಿದ್ದು ಆತಂಕ ಮೂಡುವಂತೆ ಮಾಡಿದೆ……