ಮುಂಬೈ:
ತಮ್ಮ ಸ್ಫೋಟಕ ಬ್ಯಾಟಿಂಗ್ ಗೆ ಹೆಸರು ವಾಸಿಯಾಗಿರುವ ವೆಸ್ಟ್ ಇಂಡೀಸ್ ತಂಡದ ಆಟಗಾರ ಕ್ರಿಸ್ ಗೇಯ್ಲ್ ಮುಂಬೈ ಪೊಲೀಸ್ ಬೈಕ್ ಏರಿ ಪೋಸ್ ಕೊಟ್ಟಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕ್ರಿಸ್ ಗೇಯ್ಲ್ ವೆಸ್ಟ್ ಇಂಡೀಸ್ ಬಿಟ್ಟರೆ ಹೆಚ್ಚಿನ ಸಮಯವನ್ನು ಭಾರತದಲ್ಲೇ ಕಳೆಯುತ್ತಾರೆ. ಇನ್ನು ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಆಡುವ ಕ್ರಿಸ್ ಗೇಯ್ಲ್ ಭಾರತದ ಮೇಲೆ ಹೆಚ್ಚಿನ ವ್ಯಾಮೋಹವಿದೆ.
ಪ್ರಸ್ತುತ ಭಾರತ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ತಂಡದಲ್ಲಿ ಕ್ರಿಸ್ ಗೇಯ್ಲ್ ಆಡುತ್ತಿಲ್ಲ. ಆದರೆ ಅವರು ಮುಂಬೈಗೆ ಭೇಟಿ ಕೊಟ್ಟಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಗ್ರೇಟ್ ಫುಲ್, ಥ್ಯಾಂಕ್ ಫುಲ್, ಐ ಲವ್ ಇಂಡಿಯಾ ಎಂದು ಬರೆದುಕೊಂಡಿದ್ದಾರೆ.
ಮುಂಬೈ ಪೊಲೀಸರ ಬೈಕ್ ಮೇಲೆ ಕುಳಿತು ಕ್ರಿಸ್ ಗೇಯ್ಲ್ ಪೋಸ್ ಕೊಟ್ಟಿದ್ದು ಇದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.