Breaking News

ಬಿಜೆಪಿ, ಜೆಡಿಯು ಸಮಾನ ಸ್ಥಾನಗಳಲ್ಲಿ ಸ್ಪರ್ಧೆ..!

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸ್ಪಷ್ಟನೆ....

SHARE......LIKE......COMMENT......

ನವದೆಹಲಿ: 

ಇಂದು ದೆಹಲಿಯಲ್ಲಿ ಬಿಹಾರ ಮುಖ್ಯಮಂತ್ರಿ, ಜೆಡಿಯು ಮುಖ್ಯಸ್ಥ ನಿತಿಶ್ ಕುಮಾರ್ ಜತೆ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್ ಶಾ, ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಸಮಾನ ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಉಭಯ ಪಕ್ಷಗಳು ತಲಾ ಎಷ್ಟು ಕ್ಷೇತ್ರಗಳಲ್ಲಿ ಮತ್ತು ಯಾವ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ ಎಂಬುದನ್ನು ಮುಂದಿನ ಎರಡ್ಮೂರು ದಿನದಲ್ಲಿ ತಿಳಿಸಲಾಗುವುದು ಎಂದರು.

ಇತರೆ ಎನ್ ಡಿಎ ಮಿತ್ರ ಪಕ್ಷಗಳಾದ ಎಲ್ ಜೆಪಿ ಮತ್ತು ಆರ್ ಎಲ್ ಎಸ್ ಪಿ ಸೀಟ್ ಹಂಚಿಕೆ ಸೂತ್ರದ ಪ್ರಕಾರ ಸ್ಥಾನಗಳನ್ನು ಪಡೆಯಲಿದ್ದಾರೆ ಎಂದು ಬಿಜೆಪಿ ಮುಖ್ಯಸ್ಥ ಹೇಳಿದ್ದಾರೆ.

ಆರ್ ಎಲ್ ಎಸ್ ಪಿಯ ಉಪೇಂದ್ರ ಕುಶ್ವಾರ ಮತ್ತು ಎಲ್ ಜೆಪಿಯ ರಾಮ್ ವಿಲಾಸ್ ಪಾಸ್ವಾನ್ ಅವರು ನಮ್ಮೊಂದಿಗೇ ಇರಲಿದ್ದಾರೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

ಬಿಹಾರದಲ್ಲಿ 40 ಲೋಕಸಭಾ ಸ್ಥಾನಗಳಿದ್ದು, ಎನ್‌ಡಿಎ ಮಿತ್ರಕೂಟದಲ್ಲಿ ಬಿಜೆಪಿ ಜತೆಗೆ ಜೆಡಿಯು, ಎಲ್‌ಜೆಪಿ ಮತ್ತು ಆರ್‌ಎಸ್‌ಎಲ್‌ಪಿ ಪಕ್ಷಗಳಿವೆ. ಈ ಪೈಕಿ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಎಲ್‌ಜೆಪಿ, ಆರ್‌ಎಲ್‌ಎಸ್‌ಪಿ 31 ಲೋಕಸಭಾ ಸ್ಥಾನ ಗೆದ್ದಿದ್ದರೆ, ಜೆಡಿಯು ಎರಡು ಸ್ಥಾನ ಮಾತ್ರ ಗೆಲುವು ದಾಖಲಿಸಿತ್ತು……