ತುಮಕೂರು:
ಮಹಾನಗರ ಪಾಲಿಕೆ ಮಾಜಿ ಮೇಯರ್ ರವಿಕುಮಾರ್ ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿಯ ಮೇಲೆ ಇಂದು ನಸುಕಿನ ಜಾವ ಪೊಲೀಸರು ಗುಂಡು ಹಾರಿಸಿದ್ದಾರೆ. ಪ್ರಕರಣದ ಎರಡನೇ ಆರೋಪಿ ಮಧುಗಿರಿಯ ಮಲ್ಲೇಶ್ ಎಂಬಾತನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ನಿನ್ನೆರಾತ್ರಿ ಮಲ್ಲೇಶ್ನನ್ನು ಕ್ಯಾತಸಂದ್ರ ಪೊಲೀಸರು ಬಂಧಿಸಿದ್ದರು.
ಠಾಣೆಗೆ ಕರೆತರುವ ವೇಳೆ ಪೊಲೀಸರ ಮೇಲೆ ಹಲ್ಲೆಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಮಧುಗಿರಿ ಮಲ್ಲೇಶನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಗಾಯಗೊಂಡಿರುವ ಮಲ್ಲೇಶ್ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆರೋಪಿ ಮಲ್ಲೇಶ್ ತಪ್ಪಿಸಿಕೊಳ್ಳುವ ವೇಳೆ ಕೈಗೆ ಹಾಕಿದ್ದ ಚೈನ್ನಿಂದ ಮುಖ್ಯ ಪೇದೆ ಸೈಮನ್ ವಿಕ್ಟರ್ ಕುತ್ತಿಗೆಗೆ ಬಿಗಿದಿದ್ದ ಎನ್ನಲಾಗಿದೆ. ನೋವಿನಿಂದ ಬಳಲುತ್ತಿರುವ ಪೇದೆಯನ್ನ ಚಿಕಿತ್ಸೆಗಾಗಿ ತುಮಕೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಎಸ್ಪಿ ದಿವ್ಯಾಗೋಪಿನಾಥ್ ಭೇಟಿ ನೀಡಿ ಪರಿಶೀಲಿಸಿದರು. ಒಟ್ಟಾರೆ ರವಿಕುಮಾರ್ ಹತ್ಯೆ ಪ್ರಕರಣದಲ್ಲಿ ಈವರೆಗೆ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದಂತಾಗಿದೆ…….