Breaking News

ಪೂಜಾ ಧಂಡಾಗೆ ಐತಿಹಾಸಿಕ ಕಂಚು..!

6 ವರ್ಷದಲ್ಲಿ ಪದಕ ಗೆದ್ದ ಮೊದಲ ಮಹಿಳಾ ಕುಸ್ತಿ ತಾರೆ....

SHARE......LIKE......COMMENT......

ಬುಡಾಪೆಸ್ಟ್ (ಹಂಗೇರಿ):

ಹಂಗೇರಿಯಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಭಾರತದ ಪೂಜಾ ಧಂಡಾ ಕಂಚಿನ ಪದಕ ಗಳಿಸಿದ್ದಾರೆ. ಈ ಮೂಲಕ ಕಳೆದ ಆರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಕುಸ್ತಿಯಲ್ಲಿ ಪದಕ ಗಳಿಸಿದ ಭಾರತದ ಮಹಿಳಾ ಕುಸ್ತಿ ಪಟು ಎನ್ನುವ ಕೀರ್ತಿಗೆ ಪೂಜಾ ಪಾತ್ರರಾದರು.

ಹರಿಯಾಣ ಮೂಲದ ಪೂಜಾ ಪಾಲಿಗೆ ಇದು ಮೊದಲ ಅಂತರಾಷ್ಟ್ರೀಯ ಪದಕವಾಗಿದ್ದು ನಾರ್ವೆಯ ಗ್ರೇಸ್ ಬುಲೆನ್ ಅವರನ್ನು 10-7 ಅಂತರದಿಂದ ಸೋಲಿಸುವ ಮೂಲಕ ಇವರು ಈ ಸಾಧನೆ ಮಾಡಿದ್ದಾರೆ.ಇದಕ್ಕೆ ಮುನ್ನ ಭಾರತದ ಅಲ್ಕಾ ತೋಮರ್ (2006), ಗೀತಾ ಫೋಗಟ್ ಮತ್ತು ಬಬಿತಾ ಫೊಗಟ್ (2012) ವಿಶ್ವ ಕುಸ್ತಿಯಲ್ಲಿ ಪದಕ ಗಳಿಸಿದ್ದರು. ಈ ಮೂವರು ಸಹ ಕಂಚಿನ ಪದಕವನ್ನೇ ಗಳಿಸಿದ್ದರೆನ್ನುವುದು ಗಮನಾರ್ಹ.

57 ಕೆಜಿ ವಿಭಾಗದಲ್ಲಿ ಮಹಿಳಾ ಕುಸ್ತಿ ಪಂದ್ಯಾವಳಿಯ ಕಡೆಯ ದಿನ ಪೂಜಾಗೆ ಕಂಚಿನ ಪದಕ ಒಲಿದಿದೆ.ಪಂದ್ಯಾವಳಿಯಲ್ಲಿ ಇದು ಭಾರತದ ಪಾಲಿಗೆ ಎರಡನೇ ಪದಕವಾಗಿದೆ. ಇದಕ್ಕೆ ಮುನ್ನ ಪುರುಷರ ವಿಭಾಗದ ಫ್ರೀ ಸ್ಟೈಲ್ ಕುಸ್ತಿ 65 ಕೆಜಿ ವಿಭಾಗದಲ್ಲಿ ಬಜರಂಗ್ ಪೂನಿಯಾ ಬೆಳ್ಳಿ ಪದಕ ಗಳಿಸಿದ್ದರು……