Breaking News

ಕೂದಲು ಉದುರುವ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚು..!?

SHARE......LIKE......COMMENT......

ಹೆಲ್ತ್‌ ಟಿಪ್ಸ್:

ನಿತ್ಯ 100 – 250 ಕೂದಲು ಉದುರಿದರೆ, ಸಾಮಾನ್ಯ ಎಂದು ಹೇಳಲಾಗುತ್ತದೆ. ಆದರೆ ಈ ಸಂಖ್ಯೆ ಹೆಚ್ಚುತ್ತ ಹೋದರೆ, ಅಥವಾ ಕೂದಲು ತೆಳ್ಳಗಾಗಿ ತುಂಡಾಗುತ್ತಿದ್ದರೆ, ಇದಕ್ಕೆ ಚಿಕಿತ್ಸೆ ಅವಶ್ಯಕ.

ಮಹಿಳೆಯರಿಗೆ ಕೂದಲು ಉದುರಲು ಕಾರಣ ಇಲ್ಲಿದೆ ನೋಡಿ:

*ಹಾರ್ಮೋನ್ಸ್​: ಹಾರ್ಮೋನ್​ ಅಸಮತೋಲನತೆ ಹಲವಾರು ಸಮಸ್ಯೆಗೆ ಕಾರಣವಾಗುತ್ತದೆ. ಅದಕ್ಕಾಗಿ ಋತುಸ್ರಾವದ ಸಮಯದಲ್ಲಿ ಕೂದಲು ಹೆಚ್ಚು ಎಣ್ಣೆಯಾಗುವುದು, ಉದುರುವುದು ಕಂಡುಬರುತ್ತದೆ. ಹಾಗೇ ಗರ್ಭಿಣಿಯಾದ ಸಮಯದಲ್ಲೂ ಕೂದಲು ಉದುರುವುದು ಹೆಚ್ಚಾಗುತ್ತದೆ. ಹಾಗಾಗಿ ಹಾರ್ಮೋನ್ ಅಸಮತೋಲನ ಕೂಡ ಕಾರಣವಾಗುತ್ತದೆ.

*ಒತ್ತಡ:  ಒತ್ತಡ ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಮಹಿಳೆಯರಿಗೆ ಒತ್ತಡ ಉಂಟಾದಾಗ ಹಸಿವು ಕಡಿಮೆಯಾಗುತ್ತದೆ. ಹೀಗಾಗಿ ಉತ್ತಮ ಆಹಾರ ಸೇವನೆ ಕಡಿಮೆಯಾಗುತ್ತದೆ. ದೇಹಕ್ಕೆ ಸರಿಯಾದ ಪೌಷ್ಠಿಕಾಂಶ ಸಿಗದಿದ್ದಾಗ, ಕೂದಲು ಉದುರುವ ಸಮಸ್ಯೆ ಆರಂಭವಾಗುತ್ತದೆ……

*ಮೆನುಪಾಸ್​ ಸಮಯ: ಈ ಸಮಯದಲ್ಲಿ ದೇಹದಲ್ಲಿ ವಿವಿಧ ರೀತಿಯ ಬದಲಾವಣೆಗಳು ​ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಮೆನುಪಾಸ್​ ಆರಂಭದಲ್ಲಿ ಹಾಗೇ ಕೆಲ ತಿಂಗಳ ಕಾಲ ಇರುತ್ತದೆ. ಆದಷ್ಟು ಆರೋಗ್ಯಕರ ಆಹಾರ ಸೇವಿಸಿ.ಈ ಕಾರಣಗಳನ್ನು ಹೊರತುಪಡಿಸಿ, ಹೊರಗಿನ ಧೂಳು, ಸರಿಯಾದ ಆಹಾರ ಸೇವಿಸದೇ ಇರುವುದು ಕೂಡ ಕೂದಲು ಉದುರುವುದಕ್ಕೆ ಕಾರಣವಾಗುತ್ತದೆ……

*ವಿಟಮಿನ್​ ಬಿ12 ಕೊರತೆ: ವಿಟಮಿನ್​ ಬಿ12 ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್​. ಇದು ರಕ್ತದ ಮೂಲಕ ದೇಹದ ಎಲ್ಲ ಭಾಗಕ್ಕೂ ಆಮ್ಲಜನಕ ಪೂರೈಸಲು ಸಹಾಯ ಮಾಡುತ್ತದೆ. ಈ ವಿಟಮಿನ್​ ಕೊರತೆ ಉಂಟಾದರೆ ನಿಶ್ಶಕ್ತಿ ಅನುಭವವಾಗುತ್ತದೆ. ಹಾಗೇ ಈ ವಿಟಮಿನ್​ ಕಡಿಮೆಯಾದರೆ ಕೂದಲಿಗೆ ಅಗತ್ಯ ಪ್ರಮಾಣದ ರಕ್ತ ಪೂರೈಕೆ ಆಗದೇ ಕೂದಲು ಉದುರುತ್ತದೆ……..