Breaking News

ಕೇವಲ 4 ಗಂಟೆಯಲ್ಲಿ ಪ್ಯಾನ್ ಕಾರ್ಡ್!

ನೇರ ತೆರಿಗೆ ವಿಭಾಗದ ಅಧ್ಯಕ್ಷ ಸುಶೀಲ್ ಚಂದ್ರ ಮಾಹಿತಿ.....

SHARE......LIKE......COMMENT......

ನವದೆಹಲಿ: 

ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದರೆ ಹಲವು ದಿನಗಳ ಕಾಲ ಕಾಯುವುದು ಶೀಘ್ರವೇ ಕೊನೆಯಾಗಲಿದೆ. ಯೆಸ್,ತೆರಿಗೆ ಇಲಾಖೆ  ಕೇವಲ 4 ಗಂಟೆಗಳಲ್ಲಿ ಪ್ಯಾನ್ ಕಾರ್ಡ್ ನ್ನು ನೀಡುವುದಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಶೀಘ್ರವೇ ಗ್ರಾಹಕರಿಗೆ ಪ್ಯಾನ್ ಕಾರ್ಡ್ ನಾಲ್ಕು  ಗಂಟೆಗಳಲ್ಲೇ ಕೈ ಸೇರಲಿದೆ.

ನೇರ ತೆರಿಗೆ ವಿಭಾಗದ ಕೇಂದ್ರ ಮಂಡಾಳಿಯ ಅಧ್ಯಕ್ಷ ಸುಶೀಲ್ ಚಂದ್ರ ಇಂಡಸ್ಟ್ರಿ ಕಾನ್ಫರೆನ್ಸ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ತಮ್ಮ ಇಲಾಖೆ ತಂತ್ರಜ್ಞಾನ ಹಾಗೂ ಆಟೋಮೇಷನ್ ನ್ನು ತೆರಿಗೆ ಪೂರ್ವಪಾವತಿ, ರಿಟರ್ನ್ಸ್ ಸಲ್ಲಿಕೆ, ರೀಫಂಡ್ ಸೇರಿದಂತೆ ಹಲವು ವಿಭಾಗಗಳಲ್ಲಿ ಅಳವಡಿಸಿಕೊಂಡಿದೆ. ಈ ಪೈಕಿ ಪ್ಯಾನ್ ಕಾರ್ಡ್ ವಿತರಣೆಯೂ ಒಂದಾಗಿದ್ದು ಒಂದು ವರ್ಷದೊಳಗಾಗಿ ಕೇವಲ 4 ಗಂಟೆಗಳಲ್ಲಿ ಪ್ಯಾನ್ ಕಾರ್ಡ್ ಗ್ರಾಹಕರ ಕೈ ಸೇರಲಿದೆ ಎಂದು ಹೇಳಿದ್ದಾರೆ.

2018-19 ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ನ್ನು ಸಲ್ಲಿಕೆ ಮಾಡುವವರ ಸಂಖ್ಯೆ  ಕಳೇದ ವರ್ಷಕ್ಕಿಂತ ಶೇ.50 ರಷ್ಟು ಹೆಚ್ಚಾಗಿದೆ (6.08 ಕೋಟಿ) ಎಂದು ಸುಶೀಲ್ ಚಂದ್ರ ಹೇಳಿದ್ದಾರೆ……..