ಚೆನೈ:
ಕೊರೋನಾಗೆ ದೇಶದಲ್ಲಿ ಮೊದಲ ಶಾಸಕ ಬಲಿಯಾಗಿದ್ದಾರೆ. ತಮಿಳುನಾಡಿನ ಡಿಎಂಕೆ ಪಕ್ಷದ ಹಿರಿಯ ಶಾಸಕ 61 ವರ್ಷದ ಅನ್ಬಳಗನ್ ಕೊರೋನಾ ಸೋಂಕಿನಿಂದಾಗಿ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಜೀವ ಬಿಟ್ಟಿದ್ದಾರೆ. ಜೂನ್ 2ರಂದು ಅನ್ಬಳಗನ್ಗೆ ಕೊರೋನಾ ಸೋಂಕು ಹರಡಿತ್ತು . ಜೂನ್ 3ರಿಂದ ವೆಂಟಿಲೇಟರ್ನಲ್ಲಿದ್ದ ಶಾಸಕ ಅನ್ಬಳಗನ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಸತತ ಮೂರು ಬಾರಿ ಡಿಎಂಕೆಯಿಂದ ಆಯ್ಕೆಯಾಗಿದ್ದ ಅನ್ಬಳಗನ್, ಚೆಪಾಕ್ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದರು .ವಿಚಿತ್ರ ಅಂದ್ರೆ ಅನ್ಬಳಗನ್ ಕುಟುಂಬ ಸದಸ್ಯರಿಗೂ ಕೊರೋನಾ ಸೋಂಕು ತಗುಲಿದೆ……