ಕೊಲಂಬೋ:
ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಐದನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 219 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು.ಈ ಪಂದ್ಯದಲ್ಲಿ ಮೈದಾನದ ಅಂಪೈರ್ ಪಾಕಿಸ್ತಾನದ ಅಲೀಂ ದಾರ್ ತಮ್ಮ ಚಾಕಚಕ್ಯತೆ ತೋರಿ ನಿಖರವಾಗಿ ಔಟ್ ತೀರ್ಪು ನೀಡಿದ್ದರು. ಇದರಿಂದ ಇಂಗ್ಲೆಂಡ್ ತಂಡದ ಪುಂಕೆಟ್ ಡಿಆರ್ಎಸ್ ತೆಗೆದುಕೊಂಡರು. ಆಗ ಮೂರನೇ ಅಂಪೈರ್ ದೃಶ್ಯಗಳನ್ನು ಪರಿಶೀಲಿಸಿ ಔಟ್ ತೀರ್ಪು ಕೊಟ್ಟರು.